ಹೊನ್ನಾವರ: ಜಗತ್ತಿನ ಮುಂದುವರಿದ ದೇಶಗಳು ಪರಿಸರದ ಸ್ವಚ್ಛತೆಗೆ ತುಂಬಾ ಮಹತ್ವ ಕೊಟ್ಟಿವೆ. ಕಸ ಹಾಗೂ ಕೊಳಕು ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ನಗರಗಳನ್ನು ಹಾಗೂ ಜನರು ವಾಸಿಸುವ ಸ್ಥಳಗಳನ್ನು ಶುದ್ಧವಾಗಿಡಲು ಅನೇಕ ಕ್ರಮಗಳನ್ನು ಕೈಗೊಂಡಿವೆ. ಹೀಗೆ ಜನ ವಸತಿಯ ಪ್ರದೇಶವನ್ನು ಕೊಳಕು ಮುಕ್ತ ಮಾಡುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಬಹುದು. ತನ್ಮೂಲಕ ದೇಶದ ಪ್ರಗತಿಗೆ ಮಾನವ ಸಂಪನ್ಮೂಲದ ಸದ್ಬಳಕೆ ಸಾಧ್ಯ. ಬಹುಶಃ ಸ್ವಚ್ಛತೆಯನ್ನು ಪಾಲಿಸುತ್ತಿರುವುದರಿಂದಲೇ, ಅನೇಕ ಪಾಶ್ಚಿಮಾತ್ಯ ದೇಶಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳೂ, ಸ್ವಚ್ಛತೆಗೆ ಮಹತ್ವ ನೀಡುತ್ತಿವೆ. ಈ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿವೆ. ಭಾರತ ದೇಶವೂ ಸ್ವಚ್ಛತೆಗೆ ಮಹತ್ವ ನೀಡಿದ್ದು, ಭಾರತ ಸರಕಾರವು ಸ್ವಚ್ಛತೆಯನ್ನು ಸಾಧಿಸಲು ಅನೇಕ ಮಹತ್ತರ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದೆ.

RELATED ARTICLES  ಉತ್ತರ ಕನ್ನಡದ ಇಂದಿನ ಕೊರೋನಾ ಅಪ್ಡೇಟ್ ಇಲ್ಲಿದೆ.

ಹೊನ್ನಾವರ ತಾಲೂಕಿನ ಹಳದೀಪುರ ಗ್ರಾಮದ ಕುದಬೈಲ್ ನ ಯುವ ತಂಡ ತಮ್ಮದೇ ಆದ ಸಂಘವನ್ನು ರಚಿಸಿಕೊಂಡು ಸ್ವಚ್ಚತಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ನಿರ್ಮಲ ಗ್ರಾಮದ ಕನಸು ಕಟ್ಟುತ್ತಿದ್ದಾರೆ. ಅದುವೇ ವಿಜಯಲಕ್ಷ್ಮೀ ಸ್ವ ಸಹಾಯ ಸಂಘ.

RELATED ARTICLES  ಗೊರಟೆ ಪ್ರೌಢಶಾಲೆಯಲ್ಲಿ ನಡೆಯಿತು ಭಾವಪೂರ್ಣ ಮಾತೃವಂದನ ಕಾರ್ಯಕ್ರಮ

ವಿಜಯಲಕ್ಷ್ಮಿ ಸ್ವ ಸಹಾಯ ಸಂಘದವರು ಪ್ರತೀ ವಾರ ಕುದಬೈಲ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತಿದ್ದು ಅಲ್ಲಲ್ಲಿ ಕಸದ ಡಬ್ಬಿಗಳನ್ನಿಟ್ಟು ಇತರರಿಗೂ ಕಂಡ ಕಂಡಲ್ಲಿ ಕಸ ಎಸೆಯದಂತೆ ಸೂಚನೆ ನೀಡಿದ್ದಾರೆ.

ಸಂಘಟನೆಯ ಮೂಲಕ ಮಾಡುತ್ತಿರುವ ಈ ಕಾರ್ಯ ಅಪಾರ ಜನ ಮೆಚ್ಚುಗೆ ಗಳಿಸಿದೆ.