ಕುಮಟಾ: ತಾಲೂಕಿನ ತೊರ್ಕೆ ನಾಮದಾರಿ ಸಭಾಬವನದಲ್ಲಿ ಯಶೋದರನಾಯ್ಕ ಟ್ರಸ್ಟ ವತಿಯಿಂದ ಗ್ರಾಮೀಣ ಮಹಿಳೆಯರ ಸಬಲೀಲರಣ ಯೊಜನೆಯಡಿ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣೆ ಹಾಗೂ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನೆರವೇರಿತು.

ದಿವಾಕರ ಅಘನಾಶಿನಿ ಟ್ರಸ್ಟ ನಡೆದು ಬಂದ ದಾರಿ ಮತ್ತು ಉದ್ದೇಶವನ್ನ ವಿವರಿಸಿದರು. ನಿವೃತ್ತ ಶಿಕ್ಷಕರಾದ ಪರಮೇಶ್ವರ ನಾರಾಯಣ ನಾಯ್ಕ ಹಾಗೂ ಗಣ್ಯರು ಕಾರ್ಯಕ್ರಮವನ್ನ ದೀಪ ಬೆಳಗಿಸುವದರೊಂದಿಗೆ ಉದ್ಗಾಟಿಸಿದರು.

RELATED ARTICLES  ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿಂದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.

ಈ ಸಂದರ್ಭದಲ್ಲಿ ಪರಮೇಶ್ವರ ನಾಯ್ಕ ಅವರನ್ನು ಟ್ರಸ್ಟ ನ ಅಧ್ಯಕ್ಷ ಯಶೋದರ ನಾಯ್ಕ ಸನ್ಮಾನಿಸಿದರು. ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣೆ.ಪ್ರಮಾಣ ಪತ್ರ ವಿತರಣೆ ಮತ್ತು ಹೊಲಿಗೆ ಯಂತ್ರ ವಿತರಣೆ ನೆರವೇರಿತು.

ಅತಿಥಿಗಳಾಗಿ ವೇದಿಕೆಯಲ್ಲಿದ್ದ ಗಣ್ಯರು ಯಶೊದರ ನಾಯ್ಕ ಅವರ ಸಮಾಜಮುಖಿ ಕಾರ್ಯವನ್ನ ಶ್ಲಾಘಿಸಿ ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಯಶೋಧರ ನಾಯ್ಕ ಮಾತನಾಡಿ ಮುಂದಿನ ದಿನಗಳಲ್ಲಿ ಟ್ರಸ್ಟ ವತಿಯಿಂದ ಬ್ಯಾಂಕ್ ಆರಂಬಗೊಳ್ಳಲಿದ್ದು ಮಹಿಳಾ ಸದಸ್ಯರಿಗೆ ಮೊದಲ ಅದ್ಯತೆ ನೀಡಲಾಗುವುದು ಎಂದರು.

RELATED ARTICLES  ಇಂದು ಉತ್ತರ ಕನ್ನಡದಲ್ಲಿ 20 ಮಂದಿಗೆ ಕೊರೋನಾ ದೃಢ

ಕಾರ್ಯಕ್ರಮದಲ್ಲಿ ಉಲ್ಲಾಸ ನಾಯ್ಕ.ಭಗೀರಥ ಗೋವೇಕರ.ವಿಠಲ ಪೆರುಮನೆ.ಶಿವಾನಂದ ನಾಯಕ.ರಮೆಶ ನಾಯ್ಕ.ರಾಜೇಶ ಮಹಾಲೆ , ಪಾಡುರಂಗ ನಾಯ್ಕ.ನಾಗಮ್ಮ ಗಾಂವಕರ.ಪೂರ್ಣಿಮಾ ನಾಯ್ಕ.ಭಾರತಿ ದೇವತೆ
ಅರುಣ ನಾಯ್ಕ.ಗಣಪತಿ ನಾಯ್ಕ.ಸುಮಿತ್ರಾ ಗೌಡಾ.ಡಾ ಜಗದೀಶ ನಾಯ್ಕ.ನಾರಾಯಣ ಜನ್ನು, ಜಗದೀಶ ನಾಯ್ಕ.ವಾಸುದೆವ ನಾಯಕ.ಉದ್ಯಮಿಗಳಾದ ಹರಿಶ ಶೇಟ್ ಸತ್ಯಾ ಜಾವಗಲ್.ಜಗದೀಶ ನಾಯಕ್ ಉಪಸ್ಥಿತರಿದ್ದರು