ಕುಮಟಾ:- ಕನ್ನಡ ಸಾಹಿತ್ಯ ಪರಿಷತ್ ಕುಮಟಾ ಇವರ ಸಹಯೊಗದಲ್ಲಿ ಪೆಭ್ರವರಿ 24 ರಂದು ಕುಮಟಾ ತಾಲೂಕಾ 6ನೇಯ ಕನ್ನಡ ಸಾಹಿತ್ಯ ಸಮ್ಮೆಳನವು ಗುಡೇಅಂಗಡಿ(ಬಾಡ) ಶ್ರೀ ಕಾಂಚಿಕಾಂಬ ರಥಬೀದಿ ಯಲ್ಲಿ ನಡೆಯಲಿದ್ದು.ಇದರ ಪ್ರಯುಕ್ತ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಸುದ್ಧಿಗೋಷ್ಠಿಯನ್ನು ಕರೆಯಲಾಗಿತ್ತು.

ಸಮ್ಮೆಳನ ಅಧ್ಯಕ್ಷತೆಯನ್ನು ದಯಾನಂದ ತೊರ್ಕೆ ವಾಹಿಸಲಿದ್ದು.ಪೆಬ್ರವರಿ 24 ಶನಿವಾರದಂದು ಬೆಳಿಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನಿಡಲಾಗುವುದು ಎಂದು ಮಾದ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಅಪಘಾತ ಒಂಬತ್ತು ಜನ ದುರ್ಮರಣ.

ಜಿಪಂ ಸದಸ್ಯರಾದ ರತ್ನಾಕರ ನಾಯ್ಕ ಹಾಗೂ ಸ್ಥಾಯಿ ಸಮೀತಿ ಅಧ್ಯಕ್ಷರು ಮತ್ತು ಸಮ್ಮೇಳನದ ಕಾರ್ಯಾಧ್ಯಕ್ಷರಾದ ಶ್ರೀ ಜಗನ್ನಾಥ ನಾಯ್ಕ ಹಾಗೂ ಇನ್ನಿತರ ಪ್ರಮುಖರ ನೇತೃತ್ವದಲ್ಲಿ ಇಂದು ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಎರಡು ದಿನಗಳ ಕಾಲ ವಿವಿಧ ಗೋಷ್ಠಿಗಳು ಹಾಗೂ ಕಾರ್ಯಕ್ರಮಗಳು ನಡೆಯಲಿದ್ದು ಎಲ್ಲ ಕನ್ನಡಾಭಿಮಾನಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರುವಂತೆ ಕುಮಟಾ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಧರ ಉಪ್ಪಿನಗಣಪತಿ ವಿನಂತಿಸಿದ್ದಾರೆ.

RELATED ARTICLES  ಯಕ್ಷಗಾನ ಅಕಾಡೆಮಿಯ 2022ನೇ ಸಾಲಿನ ಪ್ರಶಸ್ತಿ ಪ್ರಕಟ

ಇದೇ ಸಂದರ್ಭದಲ್ಲಿ ಕಸಾಪ ಕಾರ್ಯದರ್ಶಿಗಳಾದ ಶ್ರೀ ಎಂ.ಎಂ ನಾಯ್ಕ,ಚಿದಾನಂದ ಭಂಡಾರಿ, ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀ ಪಟಗಾರ,ವಸಂತ ಶಾನಭಾಗ,ಗೋಪಾಲ ಪಟಗಾರ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.