ಗೋಕರ್ಣ: ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ ಷಾ ಫೆ.21 ರಂದು ಇಲ್ಲಿನ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಈ ಕುರಿತು ಸ್ಥಳೀಯ ಬಿ.ಜೆ.ಪಿ. ಘಟಕದಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬಿ.ಜೆ.ಪಿ. ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಮಂಜುನಾಥ ಜನ್ನು ಹೊನ್ನಾವರ ಪರೇಶ ಮೇಸ್ತಾ ಮನೆಯ ಭೇಟಿ ನಂತರ ಕುಮಟಾಕ್ಕೆ ಬಂದು ಅಲ್ಲಿಂದ ಗೋಕರ್ಣಕ್ಕೆ ಭೇಟಿ ನೀಡಲಿದ್ದಾರೆ ಎಂದರು. 4.15ಕ್ಕೆ ಇಲ್ಲಿನ ಮಹಾಗಣಪತಿ , ಮಹಾಬಲೇಶ್ವರ, ತಾಮ್ರ ಗೌರಿ ದೇವಾಲಯಕ್ಕೆ ತೆರಳಲಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ 50 ಮೀಟರ ದೂರದಿಂದ ಪಂಚವಾದ್ಯಗಳ ಮೂಲಕ ಬಿ.ಜೆ.ಪಿ. ಕಾರ್ಯಕರ್ತರು ಅಮಿತ ಷಾ ಅವರನ್ನು ಅದ್ದೂರಿಯಾಗಿ ಕರೆತರಿಲಿದ್ದಾರೆ ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಶೇಖರ ನಾಯ್ಕ, ಗ್ರಾಂ. ಪಂ. ಸದಸ್ಯ ಗಣಪತಿ ನಾಯ್ಕ, ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷ ದಯಾನಂದ ನಾಯ್ಕ ತದಡಿ, ಚಂದ್ರಕಾಂತ ಶೆಟ್ಟಿ , ನಮಿತ ನಾಯಕ, ಸತೀಶ ನಾಯಕ, ವಸಂತ ಶೆಟ್ಟಿ, ಕೃಷ್ಣ ಗೌಡ ಭಾವಿಕೊಡ್ಲ, ಉಪಸ್ಥಿತರಿದ್ದರು.