ಗಾಜಿಯಾಬಾದ್‌ : ಹೆತ್ತವರು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗಿದ್ದ ನಾಲ್ಕು ವರ್ಷ ಪ್ರಾಯದ ಬಾಲಕಿಯೊಬ್ಬಳು 10ನೇ ಮಹಡಿಯಿಂದ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ಗಾಜಿಯಾಬಾದ್‌ ನ ಇಂದ್ರಪುರಂ ಪ್ರದೇಶದಲ್ಲಿರುವ ವಸತಿ ಸೊಸೈಟಿಯೊಂದರ ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿ ಈ ದುರ್ಘ‌ಟನೆ ನಿನ್ನೆ ಸೋಮವಾರ ಸಂಜೆ ನಡೆದಿದೆ.

RELATED ARTICLES  ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಈರ್ವರ ಬಂಧನ.

ಜೈಪುರಿಯಾ ಸನ್‌ರೈಸ್‌ ಗ್ರೀನ್ಸ್‌ ಅಪಾರ್ಟ್‌ಮೆಂಟಿನ 10ನೇ ಮಹಡಿಯಲ್ಲಿನ ತಮ್ಮ ನಿವಾಸದಲ್ಲಿ ನಾಲ್ಕರ ಹರೆಯದ ಬಾಲಕಿಯ ಹೆತ್ತವರು ಆಕೆಯನ್ನು ಒಂಟಿಯಾಗಿ ಬಿಟ್ಟುಹೋಗಿದ್ದರು. ಬಾಲಕಿಯ ತಂದೆ ತನ್ನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರೆ ತಾಯಿ, ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದಾರೆ. ಈ ಬಾಲಕಿ ಹಿರಿಯ ಸೋದರಿಯೊಬ್ಬಳಿದ್ದು ಆಕೆ ಟ್ಯೂಶನ್‌ಗೆಂದು ಹೊರಗೆ ಹೋಗಿದ್ದಳು.

RELATED ARTICLES  ಯೋಧರನ್ನು ನನ್ನದೇ ಕುಟುಂಬದಂತೆ ಭಾವಿಸುತ್ತೇನೆ ; ಪ್ರಧಾನಿ ನರೇಂದ್ರ ಮೋದಿ

ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿಯು ಸ್ಟೂಲನ್ನು ಬಾಲ್ಕನಿಗೆ ಎಳೆದೊಯ್ದು ಅದರ ಮೇಲೆ ನಿಲ್ಲಲು ಯತ್ನಿಸಿದಾಗ ಆಕೆ ಆಯತಪ್ಪಿ ಹತ್ತನೇ ಮಹಡಿಯಿಂದ ಕೆಳಗೆ ಬಿದ್ದಳು.

ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ಒಯ್ದಾಗ ಅಲ್ಲಿನ ವೈದ್ಯರು ಬಾಲಕಿಯು ಅದಾಗಲೇ ಮೃತಪಟ್ಟಿರುವುದಾಗಿ ಹೇಳಿದರು.