ಶ್ರೀ ರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟ ಮಠದ ಅಂಗ ಸಂಸ್ಥೆಯಾದ ಸುಳ್ಯ ಅರಂಬೂರು ಸರಳಿಕುಂಜ ಧರ್ಮಾರಣ್ಯದಲ್ಲಿ ಸಾರ್ವಜನಿಕ ನಾಗಾರಾಧನಾ ಸಮಿತಿ, ಧರ್ಮಾರಣ್ಯ ಇವರ ಸಹಯೋಗದೊಂದಿಗೆ ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳರವರ ದಿವ್ಯ ಆಶೀರ್ವಾದಗಳೊಂದಿಗೆ ದಿನಾಂಕ 19-02-2018 ನೇ ಸೋಮವಾರ ಬೆಳಿಗ್ಗೆ ಗಂಟೆ 8-16 ರ ಮೀನ ಲಗ್ನದ ಸುಮುಹೂರ್ತದಲ್ಲಿ ಶ್ರೀ ನಾಗ ದೇವರ ಪ್ರತಿಷ್ಠಾ ಕಾರ್ಯಕ್ರಮವು ನಡೆಯಿತು.
ವೈದಿಕ ಕಾರ್ಯಕ್ರಮವು ಬ್ರಹ್ಮಶ್ರೀ ವೇ.ಮೂರ್ತಿ ವೆಂಕಟೇಶ ಶಾಸ್ತ್ರಿ ಗಳರವರ ನೇತೃತ್ವದಲ್ಲಿ ನಡೆಯಿತು. ನಾಗ ಪ್ರತಿಷ್ಠೆಯ ಅಂಗವಾಗಿ ಹಿಂದಿನ ದಿನ ರಾತ್ರಿ ದೇವತಾ ಪ್ರಾರ್ಥನೆ, ಪುಣ್ಯಾಹವಾಚನೆ, ವಾಸ್ತುಹೋಮ, ರಾಕ್ಷೋಘ್ನ ಹವನ, ಅಧಿವಾಸ ಹೋಮ ನಡೆಯಿತು. ಹಾಗೆಯೇ ಪ್ರತಿಷ್ಠಾ ದಿನ ಬೆಳಿಗ್ಗೆ ಗಣಪತಿ ಹವನ, ನಾಗಪ್ರತಿಷ್ಠಾಂಗ ಹೋಮ, ಶ್ರೀ ನಾಗ ಪ್ರತಿಷ್ಠೆ, ಕಲ್ಪೋಕ್ತ ಪೂಜೆ, ನಾಗ ತಂಬಿಲ ನಡೆಯಿತು ಮತ್ತು ರಾತ್ರಿ ಆಶ್ಲೇಷ ಬಲಿ ನಡೆಯಿತು.
ಕಾರ್ಯಕ್ರಮದಂಗವಾಗಿ ಶ್ರೀ ಗುರುಗಣಪತಿ ಭಕ್ತ ಭಜನಾ ಮಂಡಳಿ ಯವರಿಂದ ಭಜನಾ ಸತ್ಸಂಗ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮವು ನಾಗಾರಾಧನಾ ಸಮಿತಿ, ಧರ್ಮಾರಣ್ಯದ ಅಧ್ಯಕ್ಷರಾದ ಶ್ರೀ ಜಗದೀಶ್ ಅವರ ಅಧ್ಯಕ್ಷತೆ ಯಲ್ಲಿ ನಡೆಯಿತು. ವೇದಮೂರ್ತಿ ವೆಂಕಟೇಶ ಶಾಸ್ತ್ರಿ ಯವರು ನಾಗಾರಾಧನೆಯ ಬಗ್ಗೆ ಧಾರ್ಮಿಕ ಪ್ರವಚನ ನೀಡಿದರು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸುಳ್ಯ ಹವ್ಯಕ ವಲಯ ಸಮಿತಿರವರನ್ನು, ಧರ್ಮಾರಣ್ಯ ಅಭಿವೃದ್ಧಿ ಸಮಿತಿರವರನ್ನು ಹಾಗೂ ಸಾರ್ವಜನಿಕ ನಾಗಾರಾಧನಾ ಸಮಿತಿರವರನ್ನು ಧರ್ಮಾರಣ್ಯ ಸಂಚಾಲಕರಾದ ಪಿ.ಗೋಪಾಲಕೃಷ್ಣ ಭಟ್ ಅವರು ಗೌರವಿಸಿದರು. ಹಾಗೆಯೇ ಧರ್ಮಾರಣ್ಯದ ಅಭಿವೃದ್ಧಿ ಗೆ ಅಹರ್ನಿಶಿ ದುಡಿದ ಪಿ. ಗೋಪಾಲಕೃಷ್ಣ ಭಟ್ ಅವರನ್ನು ಮುಳ್ಳೇರಿಯ ಮಂಡಲಾಧ್ಯಕ್ಷರಾದ ಪ್ರೊ.ಶ್ರೀ ಕೃಷ್ಣ ಭಟ್ ಅವರು ಗೌರವಿಸಿದರು.