ಹೊನ್ನಾವರ .ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತಾಲೂಕ ಪಂಚಾಯತ ಹೊನ್ನಾವರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಡಗೇರಿ, ಹಾಗೂ ಸಿಲೆಕ್ಟ್ ಫೌಂಡೇಶನ್ (ರಿ.) ಶ್ರೀಕ್ಷೇತ್ರ ಬಂಗಾರಮಕ್ಕಿ ಗೇರಸೊಪ್ಪ ಹೊನ್ನಾವರ, ಇವರ ಆಶ್ರಯದಯಲ್ಲಿ 2017-18 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನವು ದಂದು ಹಿ. ಪ್ರಾ. ಶಾಲೆ, ಹಾಡಗೇರಿ, ಹೊನ್ನಾವರದಲ್ಲಿ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.

ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಂಕಾಳು ಎಸ್. ವೈದ್ಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. “ಈ ಊರಿನ ಬಗ್ಗೆ ನನಗೆ ಕನಿಕರವಿದ್ದು, ತಾಲ್ಲೂಕು ಮತ್ತು ಜಿಲ್ಲೆಯ ಗಡಿಬಾಗದ ಗ್ರಾಮವಾಗಿರುವುದುರಿಂದ ಇಲ್ಲಿಯ ಈಗಿನ ಪರಿಸ್ಥಿತಿಯ ಬಗ್ಗೆ ತುಂಬಾ ಬೇಜಾರಾಗಿದ್ದು, ಹಾಡಗೇರಿ ಶಾಲೆಯ ಮತ್ತು ಊರಿನ ಜನತೆಗೆ ಅವಶ್ಯಕವಿರುವ ಮೂಲಭೂತ ಸೌಕರ್ಯಗಳನ್ನು ಆದಷ್ಟು ಬೇಗನೆ ಒದಗಿಸಲು ತನ್ನ ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.

RELATED ARTICLES  ಅಂಕೋಲಾ ಸಮೀಪ ಅಪಘಾತ : ನಿವೃತ್ತ ಎ ಎಸೈ ದುರ್ಮರಣ

ಕಾರ್ಯಕ್ರಮದ ಅಧ್ಯಕ್ಷರಾದ ಅನ್ನಪೂರ್ಣಾ ಶಾಸ್ತ್ರಿ (ಅಧ್ಯಕ್ಷರು, ಗ್ರಾಮ ಪಂಚಾಯತ್ ನಗರಬಸ್ತಿಕೇರಿ) ಯವರು ಮಕ್ಕಳನ್ನು ಹಾಗೂ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಹಾಡಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಮಾತನಾಡಿ, “ಹಣವೊಂದಿದ್ದರೆ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ, ಹಣವನ್ನು ಸರಿಯಾಗಿ ಹೇಗೆ ಉಪಯೋಗಿಸಬೇಕು ಎಂಬುವುದನ್ನು ವಿದ್ಯೆ ಹೇಳಿಕೊಡುತ್ತದೆ. ಲಕ್ಷ್ಮಿ ಕೃಪಾಕಟಾಕ್ಷಕ್ಕಿಂತಲೂ ಸರಸ್ವತಿಯ ಆಶಿರ್ವಾದ ಬೇಕು. ಅದಿದ್ದಾಗ ಮಾತ್ರ ಜ್ಞಾನಜ್ಯೋತಿಯನ್ನು ಬೆಳಗಿಸಲು ಸಾಧ್ಯವಾಗುತ್ತದೆ.” ಎಂದು ಈ ಶುಭ ಸಂದರ್ಭದಲ್ಲಿ ಸಿಲೆಕ್ಟ್ ಫೌಂಡೇಶನ್ ವತಿಯಿಂದ ಶಾಲೆಯಲ್ಲಿ ಓದುತ್ತಿರುವ 50 ಮಕ್ಕಳಿಗೆ 2 ಜೊತೆ ಉಚಿತ ಸಮವಸ್ತ್ರವನ್ನು ಒದಗಿಸುವುದಾಗಿ ತಿಳಿಸಿದರು.

ಶಾಲೆಗೆ ಬೇಕಾಗಿರುವ ನೂತನ ಕಟ್ಟಡಕ್ಕೆ ಸ್ಥಳಾವಕಾಶದ ಅವಶ್ಯಕತೆ ಇದ್ದು, ಇದರ ವ್ಯವಸ್ಥೆ ಆದರೆ, ಕಟ್ಟಡಕ್ಕೆ ಬೇಕಾಗುವ ಸುಮಾರು 1.5 ಕೋಟಿ ಧನ ಸಹಾಯ ಮಾಡಲು ಮುಂದೆ ಬಂದಿರುವ ದಾನಿಗಳ ಜೊತೆ ಮುಂದಿನ ಯೋಜನೆಗಳ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಉಲ್ಲಾಸ ಈಶ್ವರ ನಾಯ್ಕ , ಕುಮಾರಿ ಪುಷ್ಪಾ. ಜಿ. ನಾಯ್ಕ , ಗೋವಿಂದ ಸುಬ್ಬು ನಾಯ್ಕ , ಉದಯ ಬಾಬು ನಾಯ್ಕ , ರಾಘವೇಂದ್ರ ನಾಯ್ಕ , ಬಾಲು ಮಸಣು ಮರಾಠಿ , ಗಣಪತಿ ಗೋವಿಂದ ಮರಾಠಿ , ನಾರಾಯಣ ಬಲೀಂದ್ರ ನಾಯ್ಕ , ಮಂಜುನಾಥ ಗಣಪು ಹಳ್ಳೇರ , ಸಿದ್ದು ಯಾಪಲಪರವಿ, , ಶ್ರೀಧರ ಶೆಟಿ ್ಟ , ಶಂಕರ ಹರಿಕಾಂತ , ಎನ್. ಎಸ್. ನಾಯ್ಕ , ರತ್ನಾಕರ ದೇಶಭಂಡಾರಿ , ಕೃಷ್ಣ ಶಿವು ಮರಾಠಿ , ಬೂದಾ ಶಿವು ಮರಾ(ಅಧ್ಯಕ್ಷರು, ಶ್ರೀ ವೀರಾಂಜನೇಯ ಹಳೆ ವಿದ್ಯಾರ್ಥಿಗ¼, ಸುರೇಶ ನಾಯ್ಕ ಮಾನ್ಯ ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಹೊನ್ನಾವರ ರವರು ಉಪಸ್ಥಿತರಿದ್ದರು.

RELATED ARTICLES  ಗೋಕರ್ಣದಲ್ಲಿ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ ಸಂಪನ್ನ