ಭಟ್ಕಳ: ಜಮಾಆತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ‘ಪ್ರವಾದಿ ಮುಹಮ್ಮದ್ ಪೈಗಂಬರ್ ಮಾನವತೆಯ ವಕ್ತಾರ’ ಎಂಬ ವಿಷಯದಡಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು ಶಿರಸಿ ಮರಾಠಿಕೊಪ್ಪದ ಸುಮನಾ ಗಣಪತಿ ಆಚಾರ್ಯ ಪ್ರಥಮ ಸ್ಥಾನಪಡೆದುಕೊಂಡಿದ್ದಾರೆ ಎಂದು ಪ್ರಬಂಧ ಸ್ಪರ್ಧೆಯ ಸಂಚಾಲಕ ಎಂ.ಆರ್.ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಮಗಳ ಹುಟ್ಟುಹಬ್ಬವನ್ನು ಮತಾದನ ಜಾಗೃತಿಗೆ ಬಳಸಿದ್ದು ಸಾರ್ಥಕತೆಯ ಕ್ಷಣ : ಅರವಿಂದ ಕಕಿಕೋಡಿ

ಭಟ್ಕಳದ ವಿಜಯಲಕ್ಷ್ಮೀ ದ್ವಿತೀಯ ಸ್ಥಾನ, ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾರಾ ವಾಸು ನಾಯ್ಕ ತೃತಿಯಾ ಸ್ಥಾನ ಪಡೆದುಕೊಂಡಿದ್ದು ಫೆ.21 ರಂದು ಸಂಜೆ 4.30ಕ್ಕೆ ಶಿರಾಲಿಯ ಜನತಾ ವಿದ್ಯಾಲಯ ಪ್ರೌಢಶಾಲಾ ಮೈದಾನದಲ್ಲಿ ಜರಗುವ ‘ಹಲವು ಧರ್ಮಗಳು ಒಂದು ಭಾರತ’ ಸೌಹಾರ್ಧ ಸಮಾವೇಶದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9886455416 ಮುಬೈಲ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

RELATED ARTICLES  ಹೊನ್ನಾವರದ ಚಿತ್ರಾಪುರದಲ್ಲಿ "ಫ್ಯಾನ್" ಸಿನಿಮಾದ ಟೀಸರ್ ಬಿಡುಗಡೆ