ಶಿವಮೊಗ್ಗ: ಐತಿಹಾಸಿಕ ಕೋಟೆ ಮಾರಿಕಾಂಬಾ ದೇವಿ ಜಾತ್ರೆಗೆ ಇಂದು ಅದ್ದೂರಿ ಚಾಲನೆ ದೊರೆತಿದೆ. ನಿಗದಿಯಂತೆ ಇಂದು ಮುಂಜಾನೆ ಸುಮಾರು 5 ಗಂಟೆಗೆ ಪೂಜೆ ಆರಂಭವಾಯಿತು. ನಗರದ ವಿವಿಧ ಭಾಗಗಳಿಂದ ಜನರು ತಂಡೋಪತಂಡವಾಗಿ ಬಂದು ದೇವಿ ದರ್ಶನ ಪಡೆದು ಆಕೆಯ ಆಶೀರ್ವಾದ ಬೇಡಿದರು

ಗಾಂಧಿಬಜಾರ್‌ನಲ್ಲಿ ಇಂದು ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಬಿಬಿ ರಸ್ತೆಯಲ್ಲಿರುವ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರು ಮಾರಿಕಾಂಬೆಗೆ ಉಡಿ ತುಂಬಿ ಪೂಜೆ ಸಲ್ಲಿಸಿದರು. ಆ ಬಳಿಕ ವಿಶ್ವಕರ್ಮ ಸಮಾಜದವರು ಸಾರ್ವಜನಿಕ ಪೂಜೆ ನೆರವೇರಿಸಿದರು. ಮುಂಜಾನೆ 6 ಗಂಟೆಯಿಂದಲೇ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಹೂವು, ಹಣ್ಣು, ಕಾಯಿ ಮಾಡಿಸಿಕೊಂಡು ಸಂತೃಪ್ತರಾಗುತ್ತಿದ್ದಾರೆ. ಪುಟ್ಟಮಕ್ಕಳನ್ನು ದೇವಿಗೆ ಮುಟ್ಟಿಸಿ ಆಕೆಯ ಆಶೀರ್ವಾದ ಪ್ರತೀಕ್ಷೆ ಸಾಮಾನ್ಯವಾಗಿತ್ತು

ಗಾಂಧೀ ಬಜಾರ್‌ನಲ್ಲಿ ಬೃಹತ್ ಚಪ್ಪರ: ಬೆಳಿಗ್ಗೆ ಯಿಂದಲೇ ಸಾವಿರಾರು ಜನರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಪರವೂರುಗಳಿಂದಲೂ ದೇವಿಯ ದರ್ಶನಕ್ಕೆ ಜನಸ್ತೋಮ ಹರಿದುಬರುತ್ತಿದ್ದು, ಭಕ್ತರಿಗೆ ಬಿಸಿಲು ಸೋಕದಂತೆ ಬೃಹದಾಕಾರದ ಚಪ್ಪರದ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನೂ ದೇವಿಯ ದರ್ಶನ ಪಡೆಯಲು ಸಾಲಾಗಿ ನಿಂದ ಭಕ್ತರ ದಾಹ ನೀಗಿಸಲು ವಿವಿಧ ಸಂಘ ಸಂಸ್ಥೆಗಳು ನೀರು, ಪಾನಕ, ಮಜ್ಜಿಗೆ ಹಂಚುತ್ತಿದ್ದವು

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 08-11-2018 ರ ರಾಶಿ ಭವಿಷ್ಯ ಇಲ್ಲಿದೆ.

ಇಂದಿನಿಂದ ಐದು ದಿನಗಳವರೆಗೆ ಶಿವಮೊಗ್ಗದಲ್ಲಿ ನಡೆಯುವ ಕೋಟೆ ಮಾರಿಕಾಂಬಾ ಜಾತ್ರೆಗೆ ಭರದ ಸಿದ್ದತೆ ತಿಂಗಳುಗಳಿಂದಲೇ ಸಿದ್ದತೆಯನ್ನು ನಡೆಸಲಾಗಿತ್ತು. ಶಿವಪ್ಪ ನಾಯಕನ ವೃತ್ತದಿಂದ ಗಾಂಧಿ ಬಜಾರ್, ರಾಮಣ್ಣ ಶ್ರೇಷ್ಟಿ ಪಾರ್ಕ್ ಹಾಗೂ ಕೋಟೆ ಮಾರಿಕಾಂಬ ದೇವಿಯ ಮಾರಿಗದ್ದುಗೆಯವರೆಗೆ ರಸ್ತೆಯನ್ನು ವೈವಿಧ್ಯಮಯ ದೀಪಗಳಿಂದ ಅಲಂಕರಿಸಲಾಗಿದೆ.

ದೇವಿಯ ದರ್ಶನಕ್ಕೆ ಶಿವಪ್ಪನಾಯಕನ ವೃತ್ತದಿಂದ ಬಜಾರಿನ ಒಳಗೆ ದೇವಿಯ ದರ್ಶನಕ್ಕೆ ಎಡ ಭಾಗದಲ್ಲಿ ಭಕ್ತರು ಸಾಲಾಗಿ ಬಂದು ದರ್ಶನ ಮಾಡಲು ಕಬ್ಬಿಣದ ಗ್ರಿಲ್ ಅಳವಡಿಸಲಾಗಿದೆ. ಒಂದು ಸಾಲಿನಲ್ಲಿ ಬಂದು ದರ್ಶನ ಮುಗಿಸಿ ನಂತರ ಬಲಗಡೆ ಇರುವ ಸಾಲಿನಿಂದ ಹೊರ ಹೋಗಲು ಅನುವುಮಾಡಿಕೊಡಲಾಗಿದೆ. ಮತ್ತೊಂದುಕಡೆ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಬರುವ ಭಕ್ತರಿಗೆ ಬಲಗಡೆಯಿಂದ ದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು ಎಡಭಾಗ ಭಕ್ತಾಧಿಗಳು ತೆರಳಲು ಅವಕಾಶ ಮಾಡಿಕೊಡಲಾಗಿದೆ.
ಭಕ್ತರಿಗೆ ಮುಡಿ ತುಂಬಲು, ಹರಕೆ ಕಾಣಿಕೆ ಹಾಕಲು ಡಬ್ಬಿಗಳ ವ್ಯವಸ್ಥೆ:
ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಹಣ್ಣು, ಸೀರೆ, ಕುಬ್ಸ, ಬಳೆ, ಅಕ್ಕಿ ಮುಂತಾದ ಹರಕೆ ವಸ್ತುಗಳನ್ನು ಅರ್ಪಿಸಲು ಭಕ್ತರಿಗೆ ಮಡಿಲಕ್ಕಿ ಕಣ ಹಾಗೂ ಭಕ್ತರ ಕಾಣಿಕೆ ಹಾಕಲು ಕಾಣಿಕೆ ಡಬ್ಬಿಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 34ಡಬ್ಬಿ ಗಳನ್ನ ಇರಿಸಲಾಗಿದ್ದು 12 ಡಬ್ಬಿಗೆ ಹಳದಿ ಬಣ್ಣದ ಬಣ್ಣ ಹಚ್ಚಲಾಗಿದೆ. ದೇವಿಯ ಎಡಭಾಗದಲ್ಲಿ 6 ಡಬ್ಬಿ, ಬಲಭಾಗದಲ್ಲಿ 6 ಡಬ್ಬಿ ಇಡಲಾಗಿದ್ದು ಮಡ್ಲಕ್ಕಿ ಹಾಕುವ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಹರಕೆ ಹಾಗೂ ಕಾಣಿಕೆ ಹಾಕುವವರಿಗೆ 7 ಸ್ಟೀಲ್ ಡಬ್ಬಿ, 9 ಹಸಿರು ಡಬ್ಬಿ, ಹಾಗೂ 4 ಪೋಸ್ಟ್ ಡಬ್ಬಿ ಇಡಲಾಗಿದೆ.

RELATED ARTICLES  ಕುಮಟಾ ದುಂಡಕುಳಿ ಸಮೀಪ ಸಾರಿಗೆ ಬಸ್ ಅಪಘಾತ

ಭಕ್ತರ ಹರಕೆ ಕಾಣಿಕೆ ಬೇರ್ಪಡಿಸಲು 40 ಮಹಿಳೆಯರು ಇದ್ದಾರೆ. ಡಬ್ಬಿಯಲ್ಲಿ ಭಕ್ತರು ಹಾಕುವ ಸೀರೆ, ಬಳೆ, ಕುಬಸ ಅಕ್ಕಿ ಮೊದಲಾದ ಹರಕೆ ಕಾಣಿಕೆಯನ್ನು ಹಾಕಿರುವುದನ್ನ ಬೇರ್ಪಡಿಸಲು ಎಡಭಾಗದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕೆ ೪೦ ಹೆಣ್ಣು ಆಳುಗಳನ್ನ ನೇಮಿಸಿಕೊಳ್ಳಲಾಗಿದೆ. ಸಮಿತಿಯ ನಿರ್ದೇಶಕರು ಈ ಸಂಗ್ರಹ ಹರಕೆ ಕಾಣಿಕೆನ್ನ ಸಾಗಿಸಲು ಮಾರುತಿ ವ್ಯಾನುಗಳ ವ್ಯವಸ್ಥೆ ಮಾಡಿಕೊಂಡಿದೆ.