ಯಲ್ಲಾಪುರ : ಅನಾರೋಗ್ಯದ ಕಾರಣಕ್ಕಾಗಿ ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ತಾಲೂಕಿನ ಮಂಚಿಕೇರಿಯ ಸಮೀಪದ ಕೆಳಗಿನ ಕಂಪ್ಲಿಯಲ್ಲಿ ನಡೆದಿದೆ.

ಕೆಳಗಿನ ಕಂಪ್ಲಿ ನಿವಾಸಿ ನಾಗವೇಣಿ ನಾರಾಯಣ ಹೆಗಡೆ(59) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ. ಕಳೆದ ಹತ್ತು ವರ್ಷಗಳಿಂದ ಮಾನಸಿಕ ಕಾಯಿಲೆ, ಸೊಂಟ ನೋವು, ಮೈಕೈ ನೋವು, ಕಾಲು ನೋವಿನಿಂದ ಮಹಿಳೆ ಬಳಲುತ್ತಿದ್ದಳು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮದೇ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

RELATED ARTICLES  ಬಸ್ ಹತ್ತುವಾಗ ಇಳಿವಾಗ ಪಿಕ್ ಪಾಕೆಟ್ ಮಾಡುತ್ತಿದ್ದ ಆರೋಪಿ ಅರೆಸ್ಟ್…!

ಆತ್ಮಹತ್ಯೆಯ ಕುರಿತು ಮೃತಳ ಗಂಡನ ತಮ್ಮನಾದ ಗಜಾನನ ಸರ್ವೇಶ್ವರ ಹೆಗಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸ್ ಉಪನಿರೀಕ್ಷಕ ಎಲ್ ಎಮ್ ನಾಯ್ಕ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

RELATED ARTICLES  ದ್ವೈವಾರ್ಷಿಕ ಬಹುಮಾನ ವಿತರಣೆ ಸುಸಂಪನ್ನ