ಕುಮಟಾ : ಬಾರಿ ನಿರೀಕ್ಷೆಯೊಂದಿಗೆ ಆಯೋಜಿಸಲಾಗಿದ್ದ ಬಿಜೆಪಿಯ ನವಶಕ್ತಿ ಸಮಾವೇಶ ಅಮಿತ್ ಶಾ ಅವರ ಅನುಪಸ್ಥಿತಿಯಲ್ಲಿ ಸಂಪನ್ನವಾಯಿತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಷಾ ರವರ ವಿಪರಿತ ಅನಾರೋಗ್ಯದ ಕಾರಣ ಈ ಸಮಾವೇಶಕ್ಕೆ ಬಾಗವಹಿಸದೇ ಹೊನ್ನಾವರದಿಂದ ಹಿಂತಿರುಗಿದರು. ದಕ್ಷಿಣ ಕನ್ನಡ ಪ್ರವಾಸದಲ್ಲಿದ್ದ ಅಮೀತ್ ಷಾ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಂದು ತೀವ್ರ ಅನಾರೋಗ್ಯದ ಪರಿಸ್ಥಿತಿಯಲ್ಲೂ ಹೊನ್ನಾವರದಲ್ಲಿ ಪರೇಶ ಮೇಸ್ತ ಮನೆಗೆ ಭೇಟಿ ನೀಡಿ, ಅಲ್ಲಿಂದ ಮುಂದಿನ ಕಾರ್ಯಕ್ರಮಗಳನ್ನು ಮೊಟಕು ಗೊಳಿಸಿ ಹಿಂತಿರುಗಿದ್ದಾರೆ ಎನ್ನಲಾಗಿದೆ.

RELATED ARTICLES  ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದದ ಉಪನ್ಯಾಸಕರ ಸಾಧನೆ.

ಬಿಜೆಪಿ ರಾಜ್ಯಾದ್ಯಕ್ಷ ಅಮಿತ್ ಶಾ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸಮಾವೇಶದಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ವಿಷಯ ತಿಳಿಸಿದರು. ಅಮೀತ್ ಷಾ ನೋಡಲು ಉತ್ಸುಕತೆಯಿಂದ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಸ್ವಲ್ಪಮಟ್ಟಿಗೆ ಅಸಮಾಧಾನಗೊಂಡರು.

ಬಿಜೆಪಿ ರಾಜ್ಯಾದ್ಯಕ್ಷ ಅಮಿತ್ ಶಾ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸಮಾವೇಶದ ಉದ್ದೇಶ ಹಾಗೂ ಕಾರ್ಯಕರ್ತರ ಕಾರ್ಯಗಳನ್ನು ವಿವರಿಸಿದರು.

ಕುಮಟಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಟಾನಿಕ್ ಆಗಬಲ್ಲ ಈ ಸಮಾವೇಶದ ಮುಖ್ಯ ಆಕರ್ಷಣೆಯಾದ ಅಮೀತ್ ಷಾ ಅನುಪಸ್ಥಿತಿಯಿಂದ ಸಭೆ ಕಳೆಗುಂದಿತ್ತು ಯಡಯೂರಪ್ಪನವರು ಅಗಮಿಸಿ ಬೂತ ಮಟ್ಟದಲ್ಲಿ ಕಾರ್ಯಕರ್ತರು ಶ್ರಮವಹಿಸಿ ಪಕ್ಷಕ್ಕೆ ಗೆಲುವು
ತರುವಂತೆ ವಿನಂತಿಸಿದರು.ಕಾರ್ಯಕರ್ತರು ಅನಂತಕುಮಾರ ಹೆಗಡೆ ಮಾತನಾಡಲೇ ಬೇಕೆಂದು ಹಠ ಹಿಡಿದಾಗ ಅನಂತಕುಮಾರ ಹೆಗಡೆಯವರು ಉತ್ತರಕನ್ನಡ ಜಿಲ್ಲೆಯ ೬ ಕ್ಷೇತ್ವವನ್ನ ಗೆಲ್ಲಿಸುವ ಬರವಸೆ ಯಡಯೂರಪ್ಪನವರಿಗೆ ನೀಡಿದರು.

RELATED ARTICLES  ಬೀದಿ ನಾಯಿಗಳ ಹಾವಳಿ: ಕಾರವಾರದ ಜನರಲ್ಲಿ ಹೆಚ್ಚುತ್ತಿದೆ ಆತಂಕ!

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರುಗಳು ಹಾಗೂ ಸುಮಾರು 6 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಹಾಜರಿದ್ದರು ಎನ್ನಲಾಗಿದೆ.