ಯಲ್ಲಾಪುರ: ಹೈನುಗಾರಿಕೆಯು ಪ್ರಮುಖ ಉತ್ಪಾದನಾ ವೃತ್ತಿಯಾಗಿದ್ದು ಅನೇಕ ಕುಟುಂಬಗಳು ಈ ವೃತ್ತಿಯಲ್ಲಿ ಲಾಭವನ್ನು ಕಂಡುಕೊಂಡು ಮುನ್ನೆಡೆದಿದೆ ಎಂದು ಟಿ ಎಸ್‍ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಹೇಳಿದರು.

ಅವರು ಪಟ್ಟಣದ ಟಿಎಸ್‍ಎಸ್ ಶಾಖಾ ಕಚೇರಿಯಲ್ಲಿ, ಶಿರಸಿಯ ಪ್ರಧಾನ ಕಚೇರಿ, ಧಾರವಾಡದ ಬೈಫ್ ಗ್ರಾಮೀಭಿವೃದ್ದಿ ಸಂಸ್ಥೆ ಸಂಯುಕ್ತವಾಗಿ ಸಂಘಟಿಸಿದ್ದ ಜಾನುವಾರು ತಳಿ ಅಭಿವೃದ್ದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಆಧುನಿಕತೆಯಲ್ಲಿ ಹೈನುಗಾರಿಕೆಯ ನಿರ್ವಹಣೆಯಲ್ಲಿ ಸುಲಭೋಪಾಯ ಕಂಡು ಕೊಳ್ಳುತ್ತಿದ್ದು ಉತ್ತಮ ಜಾನುವಾರುಗಳ ತಳಿಗಳ ವಂಶಾಭವೃದ್ದಿ ಅವಶ್ಯವಿದೆ. ಆರ್ಥಿಕ ಸಂಪನ್ಮೂಲಕ್ಕೆ ಹೆಬ್ಬಾಗಿಲಾಗಿ ರೈತರಿಗೆ ಹೊಸ ಸಂಶೋಧನೆಗಳು ಸಹಾಯಕವಾಗಬೇಕು. ಆ ದಿಸೆಯಲ್ಲಿ ಉತ್ತಮವಾದ ಕೃಷಿಕರಿಗೆ ಸ್ಥಳೀಯ ಹವಾಮಾನ ಆಹಾರ ಪದ್ದತಿಗೆ ಸೂಕ್ತವಾದ ತಳಿ ಸಂವರ್ಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇತ್ತೀಚೆಗೆ ದೇಶೀಯ ತಳಿಯ ಬಗೆಗೆ ಆಸಕ್ತಿ ಹೆಚ್ಚಾಗಿದೆ ಎಂದರು.

RELATED ARTICLES  ಯುವಾಬ್ರಿಗೇಡ್ ಹಾಗೂ ಗೋ ಪರಿವಾರ ಹೊನ್ನಾವರದಿಂದ "ನಮಗೂ ಬದುಕುವ ಹಕ್ಕಿದೆ" ಮೆರವಣಿಗೆ.

ಎಂಪಿಎಂಸಿ ಅಧ್ಯಕ್ಷ ಎಂ.ಜಿ. ಭಟ್ಟ, ಟಿಎಂಎಸ್ ಅಧ್ಯಕ್ಷ ಎನ್ ಕೆ ಭಟ್ಟ ಅಗ್ಗಾಶಿಕುಂಬ್ರಿ, ಬೈಫ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಂಯೋಜಕ ಎಂ. ಎನ್ ಕುಲಕರ್ಣಿ, ಯಲ್ಲಾಪುರದ ಬೈಫ್ ಕೇಂದ್ರ ಮುಖ್ಯಾಧಿಕಾರಿ ಪ್ರದೀಪ ಗಾಂವ್ಕಾರ ಗೋಡೆಪಾಲ, ಸಂಜಯ ಭಟ್ಟ ಇಡಗುಂದಿ. ಉಪಸ್ಥಿತರಿದ್ದರು.

RELATED ARTICLES  ಗೀತೆ ಜ್ಞಾನಾರ್ಜನೆಗೂ ಪೂರಕವಾಗಿದೆ : ನಾಗರಾಜ ಭಟ್ಟ