ಭಟ್ಕಳ: ಇಲ್ಲಿನ ಸಾಗರ ರಸ್ತೆಯ ಕಾಮಗಾರಿಯು ನಡೆಯುತ್ತಿದ್ದು, ರಸ್ತೆಗೆ ಹಾಕುವ ಬೆಡ್, ಸಿಮೆಂಟಿನಿಂದ ಮಾಡದೇ ಜಲ್ಲಿಕಲ್ಲುಗಳ ಗ್ರೀಸ್ ಪುಡಿಯಲ್ಲಿ ಕಾಮಗಾರಿಯನ್ನು ಅಂತಿಮ ಹಂತಕ್ಕೆ ತಂದು ಈ ರಸ್ತೆ ಕಾಮಗಾರಿಯನ್ನು ಸಂಪೂರ್ಣ ಕಳಪೆ ಗುಣಮಟ್ಟದಿಂದ ಮಾಡಿದ್ದಾರೆಂದು ಇಲ್ಲಿನ ತಾಲೂಕಾ ನಾಗರಿಕ ವೇದಿಕೆ ಘಟಕದಿಂದ ಆರೋಪಿಸಿದ್ದಾರೆ. ಇಲ್ಲಿನ ರಸ್ತೆಯ ಕಾಮಗಾರಿಯೂ ಜನರಿಗೆ ಕಣ್ಣು ಒರೆಸುವ ರೀತಿಯಲ್ಲಿ ಮಾಡಿದ್ದು, ತೀರಾ ಅಸಮರ್ಪಕವಾಗಿ ರಸ್ತೆ ತಯಾರಾಗಿದೆ. ಈಗಾಗಲೇ ರಸ್ತೆಯು ಕಿತ್ತುಹೋಗುತ್ತಿದ್ದು ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ರಸ್ತೆಯೂ ಸಾಗರ ರಸ್ತೆಯಿಂದ ಬಂದರವರೆಗೆ ನಡೆಯುತ್ತಿದ್ದು ರಾಜ್ಯ ರಸ್ತೆಯ ಕಾಮಗಾರಿಯಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಈ ರೀರಿಯಾಗಿ ಹಾಳು ಮಾಡುತ್ತಿದ್ದು ಇದು ಖಂಡನೀಯವಾದದ್ದು.
ಈ ಬಗ್ಗೆ ನಾಗರಿಕ ವೇದಿಕೆಯ ಗೌರವಾಧ್ಯಕ್ಷ ದತ್ತಾತ್ರೇಯ ಜೆ. ನಾಯ್ಕ “ಸಾಗರ ರಸ್ತೆಯಿಂದ ಬಂದರಿನವರೆಗೆ ರಸ್ತೆ ಕಾಮಗಾರಿಯ ಪೈಕಿ ಸಮರ್ಪಕವಾದ ಮಾಹಿತಿ ಫಲಕವನ್ನು ಹಾಕಬೇಕಾಗಿದ್ದು ಇದನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಪಾಲಿಸಿಲ್ಲ. ಕಾಮಗಾರಿಯ ಬಗ್ಗೆ ಅಧಿಕಾರಿಗಳ ಬಗ್ಗೆ ವಿಚಾರಿಸಿದಾಗ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲವಾಗಿದೆ. ಜನರ ಹಣವನ್ನು ಲೂಟಿ ಮಾಡಿ ಚುನಾವಣೆಯಲ್ಲಿ ಮೋಸ ಮಾಡಿ ಚುನಾಯಿತರಾಗುವ ಇಂತಹ ಹಗಲು ದರೋಡೆಯನ್ನು ಸಾರ್ವಜನಿಕರು ಖಂಡಿಸಬೇಕು. ರಸ್ತೆ ಕಾಮಗಾರಿಯನ್ನು ಲ್ಯಾಂಡ್ ಆರ್ಮಿ ಕಂಪನಿ ಪಡೆದುಕೊಂಡಿದ್ದು ಇಲ್ಲಿನ ಸ್ಥಳಿಯ ಗುತ್ತಿಗೆದಾರರೊಬ್ಬರು ಉಪ ಗುತ್ತಿಗೆಯನ್ನು ಪಡೆದು ರಸ್ತೆ ಕಾರ್ಯ ಮಾಡಿಸುತ್ತಿದ್ದಾರೆ. ಡಾಂಬರೀಕರಣ ಮಾಡುವ ಮೊದಲು ಬೆಡ್ ಹಾಕದೆಯೆ ಡಾಂಬರೀಕರಣವನ್ನು ಮಾಡಿ ಎರಡು ರಸ್ತೆಯ ಕಾಮಗಾರಿ ಒಂದೇ ಗುಣಮಟ್ಟದಲ್ಲಿ ನಡೆದಿಲ್ಲ ಎಂದು ಆರೋಪಿಸಿದರು.
ವೇದಿಕೆ ತಾಲುಕಾಧ್ಯಕ್ಷ ಪಾಸ್ಕಲ್ ಗೋಮ್ಸ ಮಾತನಾಡಿದ್ದು “ಸಂಬಂಧಿಸಿದ ಇಂಜಿನೀಯರ್ ಈ ರಸ್ತೆಯ ಗುಣಮಟ್ಟದ ಪರೀಕ್ಷೆ ನಡೆದಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ತಿಳಿಸಬೇಕು. ಈ ಬಗ್ಗೆ ಕ್ವಾಲಿಟಿ ಕಂಟ್ರೋಲ್ ರಿಪೋರ್ಟನ್ನು ಒಂದು ವಾರದೊಳಗೆ ಸಲ್ಲಿಸಬೇಕು ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಾಗರಿಕ ವೇದಿಕೆ ಸದಸ್ಯ ರಮೇಶ ನಾಯ್ಕ, ವಿಶ್ವ ನಾಯ್ಕ, ಶ್ರೀಧರ ನಾಯ್ಕ, ನವೀನ ನಾಯ್ಕ, ರಘು ನಾಯ್ಕ ಮುಂತಾದವರು ಇದ್ದರು.