ಭಟ್ಕಳ : ತಾಲೂಕಿನ ಶಿರಾಲಿಯ ನಿವಾಸಿ ಸಂಧ್ಯಾ ಜಿ. ಭಟ್ ಇವರು ಹಣ್ಣು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸಿದ ರೆಸ್ಪೋನ್ಸ್ ಆಫ್ ಆರ್ಗಾನಿಕ್ ಫೋರ್ಮುಲೇಶನ್ಸ್ ಆನ್ ಯೀಲ್ಡ್ ಎಂಡ್ ಕ್ವಾಲಿಟಿ ಆಫ್ ಲಿಚಿ ಕಲ್ಟಿವರ್ ರೋಸ್ ಸೆಂಟೆಡ್ ಸಂಶೋಧನಾ ಪ್ರಬಂಧಕ್ಕೆ ಉತ್ತರಖಂಡ ಗೋವಿಂದ ವಲ್ಲಭ ಪಂತ್ ಯುನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಡಾ.ಆರ್ ಎಲ್ ಲಾಲ್ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಸಿದ್ದಪಡಿಸಿದ್ದರು.ಇವರು ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಬಿ.ಎಸ್.ಸಿ.ತೋಟಗಾರಿಕೆಯಲ್ಲಿ ನಾಲ್ಕು ಚಿನ್ನದ ಪದಕ ಗಳಿಸಿರಿವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಜ್ಯೂನಿಯರ್ ರಿಸರ್ಚ್ ಪೆಲೊಸಿಪ್ ಹಾಗೂ ಸೀನಿಯರ್ ರಿಸರ್ಚ್ ಪೆಲೊಸಿಪ್ ನಲ್ಲಿ ರ್ಯಾಂಕ್ ಪಡೆದು ಪಿ.ಎಚ್.ಡಿ.ಪಡೆದಿರುವುದು ತಾಲೂಕು, ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಮಧ್ಯಪ್ರದೇಶ ವಿಶ್ವವಿದ್ಯಾಲಯದ ಬ್ಯೂ ಕೂಡ ಅಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಶಿರಾಲಿ ವೆಂಕ್ಟಾಪುರದ ಜಿ.ಎಲ್.ಭಟ್ ಮತ್ತು ಶಿಕ್ಷಕಿ ಮೂಕಾಂಬಿಕಾ ದಂಪತಿಗಳ ಪುತ್ರಿಯಾಗಿರುವ ಸಂಧ್ಯಾ ಭಟ್ ಪ್ರಸ್ತುತ ಭಟ್ಕಳ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.