ಕುಮಟಾ:ತಾಲೂಕಿನ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜು ನೆಲ್ಲಿಕೇರಿ ಇದರ ಹೆಚ್ಚುವರಿ ತರಗತಿ ಕೊಠಡಿಗಳನ್ನು ವಿದ್ಯಾರ್ಥಿಗಳ ಉಪಯೋಗಕ್ಕೆ ಲೋಕಾರ್ಪಣೆಗೊಳಿಸಲಾಯಿತು.

ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅನುಕೂಲವಾಗುವ ದೃಷ್ಟಿಯಿಂದ ದಿ. ಮೋಹನ ಶೆಟ್ಟಿಯವರು ಹೆಚ್ಚಿನ ಶ್ರಮವಹಿಸಿ ಕಾಲೇಜು ಸ್ಥಾಪಿಸಿದ್ದರು. ಈಗ ಶ್ರೀಮತಿ ಶಾರದಾ ಶೆಟ್ಟಿಯವರು ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಿದ್ದಾರೆ ಎಂದು ಪುರಸಭಾ ಅಧ್ಯಕ್ಷರಾದ ಮಧುಸೂಧನ್ ಶೇಟ್ ಹೇಳಿದರು.

RELATED ARTICLES  ವಿಧಾತ್ರಿ ಅವಾರ್ಡ್ ಕಾರ್ಯಕ್ರಮ : ಸಾಧಕರಿಗೆ ಸಮ್ಮಾನ.

ಈ ಸಂದರ್ಭದಲ್ಲಿ ಕುಮಟಾ ಪುರಸಭೆ ಅಧ್ಯಕ್ಷರಾದ ಶ್ರೀ ಮಧುಸೂದನ ಶೇಟ್,ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ರವಿಕುಮಾರ್ ಮೋಹನ್ ಶೆಟ್ಟಿ, ಬಿಇಒ ಶ್ರೀ ಅಬ್ದುಲ್ ಗಲ್ಲ ಮುಲ್ಲಾ, ಪ್ರಾಂಶುಪಾಲರಾದ ಶ್ರೀ ಸತೀಶ ಬಿ ನಾಯ್ಕ, ಎಮ್ ಪಿ ಭಟ್,ಮೋಹನ್ ನಾಯ್ಕ ಹಾಗೂ ಗುತ್ತಿಗೆದಾರರಾದ ಅಮಿತ್ ಶಾನಭಾಗ್ ಉಪಸ್ತಿತರಿದ್ದರು.

RELATED ARTICLES  ಎಸ್ ಎಸ್ ಎಲ್ ಸಿ ಪರೀಕ್ಷೆಯ ತೃತೀಯ ಭಾಷೆ ಕನ್ನಡದಲ್ಲಿ ಗೊಂದಲಕಾರಿ ಪ್ರಶ್ನೆ : ಆತಂಕದಲ್ಲಿ ವಿದ್ಯಾರ್ಥಿಗಳು.