ಕಾರವಾರ : ಹಲವು ದಶಕಗಳ ಹಿಂದೆ ಗೋವಾದ ಮೇಲೆ ನಡೆದ ಹಲವು ಆಕ್ರಮಣಗಳಿಂದಾಗಿ ಅಲ್ಲಿನ ಅನೇಕ ಸಮುದಾಯದವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಆದರೆ ಮೂಲ ನಿವಾಸಿಗಳಾದ ದೇಶಭಂಡಾರಿ ಸಮುದಾಯದವರು ಮಾತ್ರ ಅಲ್ಲಿಂದ ಕರ್ನಾಟಕಕ್ಕೆ ವಲಸೆ ಬಂದರೆ ಹೊರತು ತಮ್ಮ ಧರ್ಮ, ಜಾತಿ, ಸಂಪ್ರದಾಯ, ಸಂಸ್ಕಾರಗಳನ್ನು ಬಿಟ್ಟುಕೊಡಲಿಲ್ಲ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಅವರು ಇಲ್ಲಿನ ನಂದನಗದ್ದಾದಲ್ಲಿ ಶ್ರೀ ಸಮಾದೇವಿ ದೇವಸ್ಥಾನದ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಪ್ರಾಣ ಕೊಟ್ಟಾದರೂ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಿಡದಿರುವುದು ನಮ್ಮ ದೇಶದ ಜನರ ಹುಟ್ಟು ಸ್ವಭಾವವಾಗಿದೆ. ಕೊಂಕಣ ಪ್ರದೇಶದಲ್ಲಿ ಕಂಡು ಬರುವ ಈ ಸಮಾಜದ ಕುರಿತು ಪುರಾಣಗಳಲ್ಲಿ ಉಲ್ಲೇಖವಿದೆ. ರಾಮಚಂದ್ರಾಪುರ ಮಠ ಹಾಗೂ ದೇಶಭಂಡಾರಿ ಸಮಾಜದ ಬಾಂಧವ್ಯದ ಬಗ್ಗೆ ಕೂಡ ಇತಿಹಾಸಗಳಲ್ಲಿ ದಾಖಲಾಗಿದೆ. ಈ ಮಠವು ಅಂದು ಗೋವಾದ ಮಾಂಡೋವಿ ನದಿಯಿಂದ ಕೇರಳದ ಚಂದ್ರಗಿರಿ ನದಿಯವರೆಗೆ ತನ್ನ ವಿಶಾಲವಾದ ವ್ಯಾಪ್ತಿಯನ್ನು ಹೊಂದಿತ್ತು ಎಂದರು.

RELATED ARTICLES  ಕಡಲ ತೀರಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಮುಂದಿನ 48 ಗಂಟೆ ತೆರಳದಂತೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ದೇಶ ಕಾಯುವ ಕಾಯಕದಲ್ಲಿ ದೇಶಭಂಡಾರಿ ಸಮುದಾಯವು ತೊಡಗಿಕೊಂಡಿತ್ತು. ಛತ್ರಪತಿ ಶಿವಾಜಿ ಮಹಾರಾಜರ ಖಜಾನೆಯನ್ನು ರಕ್ಷಣೆ ಮಾಡುವ ಸೇನೆಯಲ್ಲಿ ಈ ಸಮುದಾಯವರಿದ್ದರು. ಹೀಗಾಗಿ ದೇಶಭಂಡಾರಿ ಎಂಬ ಹೆಸರು ಈ ಸಮುದಾಯಕ್ಕೆ ಬಂದಿತು ಎಂದರು.

RELATED ARTICLES  ಇಹಲೋಕ ತ್ಯಜಿಸಿದ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು.