ಕುಮಟಾ:ಮಹಾಸತಿ ಕ್ರೀಡಾ ಬಳಗದ ವತಿಯಿಂದ ವಾಲಿಬಾಲ್ ಪಂದ್ಯಾವಳಿಯನ್ನು ಬಾವಿಕೊಡ್ಲದಲ್ಲಿ ಹಮ್ಮಿಕೊಳಲಾಗಿತ್ತು. ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು
ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮಾನವನಿಗೆ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಕ್ರೀಡಾ ಕಾರ್ಯಕ್ರಮಗಳು ಕೂಡಾ ತೀರಾ ಅತ್ಯಗತ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಪರಸ್ಪರರಲ್ಲಿ ಸೌಹಾರ್ದತೆ & ಒಗ್ಗಟ್ಟುಗಳನ್ನು ಬೆಳೆಸುತ್ತವೆ. ಸಾಂಸ್ಕøತಿಕ ಕಾರ್ಯಕ್ರಮಗಳು ಮನರಂಜನೆ ನೀಡಿದರೆ ಕ್ರಿಡೆಗಳು ಮನರಂಜನೆಯೊಂದಿಗೆ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಒದಗಿಸುತ್ತವೆ ಹಾಗೂ ಮನಸ್ಸು ಉತ್ಸಾಹದಿಂದಿರುವಂತೆ ಮಾಡುತ್ತವೆ. ಶಿಕ್ಷಣದೊಂದಿಗೆ ಕ್ರೀಡಾತ್ಮಕವಾಗಿ ಮುಂದುವರಿದರೆ ಮಾತ್ರ ಪರಿಪೂರ್ಣರಾಗಲು ಸಾದ್ಯ. ಈ ನಿಟ್ಟಿನಲ್ಲಿ ಮಹಾಸತಿ ಕ್ರೀಡಾ ಬಳಗದವರು ಅಚ್ಚುಕಟ್ಟಾಗಿ ಈ ಪಂದ್ಯಾವಳಿಯನ್ನು ಸಂಘಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಈ ಭಾಗದಲ್ಲಿ ಹೆಚ್ಚು ಹೆಚ್ಚು ನಡೆಯಲಿ ಎಂದು ಶುಭ ಹಾರ್ಯೆಸಿದರು.

RELATED ARTICLES  ಮುಖ್ಯಮಂತ್ರಿ ಪರಿಹಾರಧನದ ಚೆಕ್ ವಿತರಿಸಿದ ಶಾಸಕಿ ಶಾರದಾ ಶೆಟ್ಟಿ

ಈ ಸಂದರ್ಭದಲ್ಲಿ ವೆಂಕಟ್ರಮಣ ಕವರಿ, ಅರವಿಂದ ನಾಯಕ, ಈಶ್ವರ ಗೌಡ, ಮುಂತಾದವರು ಉಪಸ್ಥಿತರಿದ್ದರು.