ಶಿರಸಿ: ನಗರದ ಶ್ರೀ ಮಹಾಗಣಪತಿ ದೇವಸ್ಥಾನ ಹಂಚಿನಕೇರಿ ಇದರ 16ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಶ್ರೀ ಮ.ನಿ.ಪ್ರ. ಶ್ರೀ ಶಿವಲಿಂಗ ಮಹಾಸ್ವಾಮಿಗಳು ಬಣ್ಣದಮಠ ಇವರ ದಿವ್ಯ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.

ಭಕ್ತರನ್ನುದ್ದೇಶಿಸಿ ಆಶೀರ್ವದಿಸಿದ ಶ್ರೀಗಳು ಭಕ್ತರು ವ್ಯಸನಮುಕ್ತರಾಗುವುದರ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜಾತಿ-ಭೇದವನ್ನು ಮರೆತು ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಂಚಿನಕೇರಿ ಭಕ್ತರ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ನುಡಿದರು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ಹಾಗು ಪ್ರಸಾದ ವಿತರಣೆ ನಡೆಯಿತು.

RELATED ARTICLES  ಚಿನ್ನದ ಸರ ನುಂಗಿದ್ದ ಹಸು..! ವೈದ್ಯರು ಅದನ್ನು ಪತ್ತೆ ಹೆಚ್ಚಿದ್ದು ಹೇಗೆ ಗೊತ್ತಾ?

ಈ ವೇಳೆ ದೇವಾಲಯದ ಅಧ್ಯಕ್ಷರಾದ ದೇವಿದಾಸ ಶೇಟ್, ಉಪಾಧ್ಯಕ್ಷ ಶಿವಪ್ಪ ನಾಯಕ, ಕಾರ್ಯದರ್ಶಿ ಡಿ ಜಿ ಹೆಗಡೆ, ಪ್ರಮುಖರಾದ ಮಹೇಶ ಹಂಚಿನಕೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಜೆ ಶ್ರೀ ದೇವರ ಫಲಾವಳಿ ಸವಾಲು ಹಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

RELATED ARTICLES  ಅಂಜುಮನ್ ಕಾಲೇಜಿನಲ್ಲಿ ಯೋಧ ೨೦೧೭ ಕ್ಕೆ ಚಾಲನೆ