ಕುಮಟಾ: ರಕ್ತಕ್ಕೆ ಪರ್ಯಾಯ ಎಂಬುದಿಲ್ಲ , ರಕ್ತಕ್ಕೆ ರಕ್ತವೇ ಪರ್ಯಾಯ.ರಕ್ತದಲ್ಲಿ ಹಲವಾರು ಗುಂಪುಗಳಿದ್ದರೂ ಅವಶ್ಯಕತೆಯಿದ್ದಾಗ ರಕ್ತ ಪಡೆಯುವಾಗಲಾಗಲೀ ,ರಕ್ತ ನೀಡುವುದಾಗಲೀ ಅದು ಒಂದೇ ಗುಂಪಿನ ರಕ್ತವಾಗಿರಬೇಕಾಗುತ್ತದೆ.ಅದಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ರಕ್ತವು ಯಾವ ಗುಂಪಿಗೆ ಸೇರಿದ್ದಾಗಿದೆ ಎಂಬುದನ್ನು ತಿಳಿದಿಟ್ಟುಕೊಳ್ಳಬೇಕಾದ್ದು ಅತ್ಯವಶ್ಯಕ ಎಂದು ಕುಮಟಾದ ‘ವಿವೇಕ ನಗರ ವಿಕಾಸ ಸಂಘ’ದ ಅಧ್ಯಕ್ಷ ಪ್ರೊ.ಎಮ್.ಆರ್.ನಾಯಕ ಅಭಿಪ್ರಾಯಿಸಿದರು.
ಅವರಿಂದು ವಿವೇಕನಗರ ವಿಕಾಸ ಸಂಘವು ‘ಶಾರದಾ ನಿಲಯ’ಸರಕಾರೀ ಕನ್ನಡ ಪ್ರಾಥಮಿಕ ಶಾಲೆ ಯಲ್ಲಿ ಹಮ್ಮಿಕೊಂಡ “ರಕ್ತ ವರ್ಗೀಕರಣ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿವೇಕ ನಗರ ವಿಕಾಸ ಸಂಘವು ಇಂತಹ ಹಲವು ವಿವಿಧ ಜನೋಪಯೋಗಿ, ಜಾಗೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ಸ್ಥಳೀಯ ಸರ್ವರ ಸಹಕಾರ-ಪಾಲ್ಗೊಳ್ಳುವಿಕೆ ಬಗ್ಗೆ ಕರೆ ನೀಡಿದರು.

RELATED ARTICLES  ನದಿಯಲ್ಲಿ ಮುಳುಗಿ ಯುವಕ ಸಾವು : ಭಟ್ಕಳದಲ್ಲಿ ದುರ್ಘಟನೆ

ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದ ನಿರ್ದೇಶಕ ಜಯದೇವ ಬಳಗಂಡಿ ಯವರು ಮಾತನಾಡಿ ಆರೊಗ್ಯ ಕಾಪಾಡಿಕೊಳ್ಳುವಲ್ಲಿ ಸ್ವಚ್ಛತೆಯ ಅರಿವಿನ ಮಹತ್ವ ತಿಳಿಸುತ್ತ , ಸ್ವಚ್ಛತೆ ಕಾಪಾಡುವಲ್ಲಿ ವಿದ್ಯಾರ್ಥಿಗಳ ಕರ್ತವ್ಯದ ಕುರಿತು ವಿವರಿಸಿದರು.

ತಾಲೂಕಾ ವೈದ್ಯಾಧಿಕಾರಿ ಡಾ.ಆಜ್ನಾ ನಾಯಕ ರವರ ಸಹಕಾರದಿಂದ ಕುಮಟಾ ಸರಕಾರಿ ಆಸ್ಪತ್ರೆಯ ಪ್ರದೀಪ ನಾಯ್ಕ ಹಾಗೂ ಪ್ರಯೋಗ ಶಾಲಾ ತಂತ್ರಜ್ನ ಭವ್ಯ ಎಚ್.ಎನ್.ಅವರು ‘ರಕ್ತ ವರ್ಗೀಕರಣ’ ಕಾರ್ಯ ನೆರವೇರಿಸಿಕೊಟ್ಟರು.

RELATED ARTICLES  ಗೋಕರ್ಣದ ಸೋಮೇಶ್ವರ ದೇವಸ್ಥಾನದಲ್ಲಿ ಕಳ್ಳರ ಕರಾಮತ್ತು : 3.5 ಲಕ್ಷ ಮೌಲ್ಯದ ಆಭರಣ ಕಳವು..!

IMG 20180223 WA0006

ವಿವೇಕನಗರ ವಿಕಾಸ ಸಂಘದ ಉಪಾಧ್ಯಕ್ಷ ನಿವೃತ್ತ ಸರಕಾರೀ ನೌಕರರಾಗಿರುವ ಎಸ್. ಆಯ್.ನಾಯ್ಕ ,ಖಜಾಂಚಿ ವಿ.ವಿ.ಹೊಸಕಟ್ಟಾ, ಕಾರ್ಯದರ್ಶಿ ದತ್ತಾತ್ರೇಯ ಭಟ್ಟ ,ನಿರ್ದೇಶಕರಾಗಿರುವ ಡಾ.ಡಿ.ಡಿ.ಭಟ್ಟ , ಎಮ್.ವಿ.ಹೆಬ್ಬಾರ , ಹಾಗೂ ಶಾಲಾ ಮುಖ್ಯಾ ಧ್ಯಾಪಕ ಮಹಾದೇವಿ ಗೌಡ ಮತ್ತು ಸಹ ಶಿಕ್ಷಕಿಯರು ಉಪಸ್ಥಿತರಿದ್ದರು.

ಶಾಲಾ ಎಲ್ಲ ಮಕ್ಕಳ ಸಹಿತ ಸ್ಥಳೀಯ ನೂರಾರು ಜನರು ರಕ್ತ ವರ್ಗೀಕರಣ ಕಾರ್ಯದ ಪ್ರಯೋಜನ ಪಡೆದರು.