ಕುಮಟಾ :ತಾಲೂಕಿನ ಡಾ// ಏ.ವಿ. ಬಾಳಿಗಾ ಮಹಾವಿದ್ಯಾಲಯದ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಸೇವಾ ಶಿಬಿರದ ಸಮಾರೋಪ ಸಮಾರಂಭವು ತಾಲೂಕಿನ ಹೊಳೆಗದ್ದೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಎನ್.ಎಸ್.ಎಸ್. ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯಾಗಿದ್ದು ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಮಂತ್ರಾಲಯದ ಯು.ಜಿ.ಸಿ. ನೇತ್ರತ್ವದಲ್ಲಿ ಸ್ವಯಂ ಸೇವೆಗಾಗಿ ರಚಿಸಲ್ಪಟ್ಟ ಸಂಸ್ಥೆಯಾಗಿದೆ. ಯುವಕರಲ್ಲಿ ಸೇವಾ ಮನೋಭಾವನೆ ಮೂಡಿಸುವುದು, ನೊಂದವರಿಗೆ, ಅಗತ್ಯ ಸಮುದಾಯ ಮತ್ತು ಜನರಿಗೆ ನೆರವು ನೀಡುವ, ಹಾಗೂ ಪ್ರಕೃತಿ ವಿಕೋಪಗಳು, ದುರಂತಗಳು ಸಂಭವಿಸಿದಾಗ ಅವರ ಸೇವೆಗೆ ಧಾವಿಸುವ ಕುರಿತು ಯುವಪಡೆಯಲ್ಲಿ ಅರಿವು ಮೂಡಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಬಾಳಿಗಾ ಮಹಾವಿದ್ಯಾಲಯದ ಅಶ್ರಯದಲ್ಲಿ ಹೊಳೆಗದ್ದೆಯಲ್ಲಿ 7ದಿನಗಳ ಕಾಲ ಜರುಗಿದ ಈ ಶಿಬಿರದಲ್ಲಿ 60 ಶಿಬಿರಾರ್ಥಿಗಳು ಪಾಲ್ಗೊಂಡು ಈ ಊರಿನ ಸುತ್ತಮುತ್ತಲಿನ ಶಾಲೆ, ಅನೇಕ ಸಾರ್ವಜನಿಕ ಪ್ರದೇಶಗಳನ್ನು ಸ್ವತಃ ತಾವೇ ಸ್ವಚ್ಛಗೊಳಿಸಿ ಸ್ವಚ್ಛತೆಯೊಂದಿಗೆ ಪ್ರಧಾನ ಮಂತ್ರಿ ಸ್ವಚ್ಛ ಭಾರತ ಅಭಿಯಾನದ ಅರಿವು ಮತ್ತು ಮಹತ್ವ, ಏಡ್ಸ ರೋಗದ ಜಾಗೃತಿ, ಬಯಲು ಶೌಚಾಲಯ ಮುಕ್ತ ಸಮಾಜ ನಿರ್ಮಾಣ, ಮುಂತಾದವುಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಥಾ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದರೊಂದಿಗೆ ಒಂದು ದಿನ ಸಾಂಸ್ಕ್ರತಿಕ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಮನರಂಜನೆಯೊಂದಿಗೆ ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿರುವುದುದು ಶ್ಲಾಘನೀಯ. ಇಂತಹ ಶಿಬಿರಗಳು ವರ್ಷಕ್ಕೆ ಕೇವಲ ಒಂದು ಸಲ ನಡೆಯದೇ ಏರಡು ಮೂರು ಬಾರಿ ನಡೆದರೆ ಹೆಚ್ಚು ಸೂಕ್ತ ಎಂದು ಶಿಬಿರಾರ್ಥಿಗಳಿಗೆ ಶುಭ ಕೋರಿದರು.

RELATED ARTICLES  ಮಲೆನಾಡಲ್ಲಿ ಧಾರಾಕಾರ ಮಳೆ..ತಗ್ಗು ಪ್ರದೇಶಗಳು ಜಲಾವೃತ

ಪ್ರೋ// ಜಯರಾಮ ಭಟ್ಟ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂಧರ್ಭದಲ್ಲಿ ಜಿ.ಪಂ. ಸದಸ್ಯ ಪ್ರದೀಪ ನಾಯಕ ದೇವರ ಬಾವಿ, ದಿನಕರ ಭಂಡಾರಿ, ಸವಿತಾ ಜೆ. ನಾಯ್ಕ, ವಿನಯ ಕುಮಾರ ನಾಯ್ಕ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಮುಸ್ತಾಫ್ ಸೀರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES  ಶಿಷ್ಯಕೋಟಿ ಸಂಘಟನೆಯ ಮಹದುದ್ದೇಶ: ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ ಜುಲೈ 3ರಿಂದ