ಭಟ್ಕಳ : ತಾಲೂಕಾ 9ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಶ್ರೀಧರ ಶೇಟ್ ರವರನ್ನು ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದಿಸಿ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ಆಹ್ವಾನಿಸಲಾಯಿತು.

ಕಸಾಪತಾಲೂಕಾಧ್ಯಕ್ಷ ಗಂಗಾಧರ ನಾಯ್ಕಮಾತನಾಡಿ ಜಿಲ್ಲಾಧ್ಯಕ್ಷರ ನಿರ್ದೇಶನದಂತೆ ಈ ಬಾರಿಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ತಾವು ಆಯ್ಕೆಯಾಗಿದ್ದೀರಿ. ಸಮ್ಮೇಲನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಕೇಳಿಕೊಂಡರಲ್ಲದೇ ತಾಲೂಕಾ ಪರಷತ್ ವತಿಯಿಂದ ಅಭಿನಂದನೆ ಸಲ್ಲಿಸಿದರು.

RELATED ARTICLES  ಧೈರ್ಯದಿಂದ ಮುನ್ನುಗ್ಗಿದರೆ ಮಾತ್ರ ಯಶಸ್ಸು ಸಾಧ್ಯ : ವೆಂಕಟೇಶ ಪ್ರಭು

ಸಾಹಿತಿ ಶ್ರೀಧರ ಶೇಟ್ ಮಾತನಾಡಿ ಕಸಾಪ ಜಿಲ್ಲಾಘಟಕ ಹಾಗೂ ತಾಲೂಕಾ ಕಸಾಪ ತಾಲೂಕುಘಟಕ ಈ ಬಾರಿಯ ಸಮ್ಮೇಲನಾಧ್ಯಕ್ಷತೆಯ ಗೌರವವನ್ನು ನೀಡಿರುವುದು ತುಂಬ ಸಂತಸದ ಸಂಗತಿ. ಎಲ್ಲರ ಪ್ರೀತಿ ವಿಶ್ವಾಸಕ್ಕೆ ಮನದಾಳದ ನಮನಗಳನ್ನು ಸಲ್ಲಿಸಿದರು.

RELATED ARTICLES  ಅಂಕೋಲಾ ಸಮೀಪ ರೈಲಿನಲ್ಲಿ ತೈಲ ಸೋರಿಕೆ : ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ.

ಈ ಸಂದರ್ಬದಲ್ಲಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ಗೌರವ ಕಾರ್ಯದರ್ಶಿ ಎಂ.ಪಿ.ಬಂಢಾರಿ,ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ,ಸಂತೋಷ ಆಚಾರ್ಯ,ಸಾಹಿತ್ಯ ಸಮ್ಮೇಲನದ ಸ್ವಾಗತ ಸಮಿತಿಯ ಉಪಾಧ್ಯಕ್ಷ ಸುಭಾಸ ಕೊಪ್ಪಿಕರ,ಸಂಘ ಸಂಸ್ಥೆ ಪ್ರತಿನಿದಿ ವೆಂಕಟೇಶ ನಾಯ್ಕ ಆಸರಕೇರಿ, ಎಮ್.ಎಸ.ನಾಯ್ಕ ಮಣ್ಕುಳಿ,ಕಿಶೋರ ಶೇಟ್, ಶ್ರೀಮತಿ ಹೇಮಲತಾ ಶ್ರೀಧರ ಶೇಟ್,ಶ್ರೀಶಾ ಉಪಸ್ಥಿತರಿದ್ದರು.