ಕುಮಟಾ: ಇಲ್ಲಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಜನತಾ ವಿದ್ಯಾಲಯ ಮಿರ್ಜಾನಿನ ಕೆನಡಿ-ನೆಹರು ಸಭಾಭವನದಲ್ಲಿ ಸ್ಕೌಡ್ಸ್ ಸಂಸ್ಥಾಪಕ ಬೇಡನ್ ಪೊವೆಲ್ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮದ ಆರಂಭದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ನೆರವೇರಿಸಲಾಯಿತು.

ಹಿರಿಯ ಸ್ಕೌಟ್ ಅಂತರಾಷ್ಟ್ರೀಯ ಸಾಧಕ ಶಿಕ್ಷಕ ರಾಜು ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಥಾನಿಕ ಘಟಕದ ಅಧ್ಯಕ್ಷ ಅತುಲ್ ಕಾಮತ ಅವರು ನೂತನವಾಗಿ ಆಯ್ಕೆಯಾದ ಗಿಬ್ ವಾಲಕಿಯರ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ರಮೇಶ ಉಪಾಧ್ಯಾಯ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಿ ಅವರನ್ನು ಗೌರವಿಸಿ ಸನ್ಮಾನಿಸಿದರು.

RELATED ARTICLES  ಕಾರು ಹಾಗೂ ಲಾರಿಯ ನಡುವೆ ಭೀಕರ ಅಪಘಾತ.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಅತುಲ್ ಕಾಮತ, ಸ್ಕೌಟ್ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ ಶಿಕ್ಷಕಿ ಬೇಬಿ ಎಸ್. ಪಡಿಯಾರ ಅವರನ್ನೂ ಹಾರ್ದಿಕವಾಗಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಅಧ್ಯಕ್ಷ ವಸಂತ ರಾವ್ ರೋಟರಿ ಸಂಸ್ಥೆಯು ಸ್ಕೌಟ್‍ನ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಆಶ್ರಯ ನೀಡುತ್ತಾ ಬಂದಿದೆ ಎಂದರು. ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ರೋಟೇರಿಯನ್ ಎನ್.ಆರ್.ಗಜು, ಬೇಡನ್ ಪೊವೆಲ್ ಅವರ ಜೀವನ ಚರಿತ್ರೆ ಮತ್ತು ಅವರು ಬರೆದ ಪುಸ್ತಕಗಳು ವಿದ್ಯಾರ್ಥಿಗಳು ಅಭ್ಯಸಿಸಲು ಯೋಗ್ಯವಾಗಿದೆ ಎಂದರಲ್ಲದೇ ಬದುಕು ರೂಪಿಸಲು ರಾಷ್ಟ್ರ ಪ್ರೇಮ ಮೆರೆಯಲು ಸೇನಾಲಕ್ಷಣ ತಿಳಿಯಲು ಸ್ಕೌಟ್ ಸುಯೋಗ್ಯವಾದುದೆಂದು ಅಭಿಪ್ರಾಯಪಟ್ಟರು.

RELATED ARTICLES  ಭಟ್ಕಳದಲ್ಲಿ ಕಸದ ಬುಟ್ಟಿ ಹೊತ್ತು ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದ ಕಾರ್ಯಕರ್ತರಾದ ಶಾಸಕ ಸುನಿಲ್ ನಾಯ್ಕ

ವರದಿಗಾರ ಜಿ.ಡಿ.ಶಾನಭಾಗ ಸ್ಕೌಟ್‍ನ ಶಿಸ್ತು ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಬಲ್ಲದು ಎಂದರು. ಮಿರ್ಜಾನ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಬಿ.ಲಕ್ಷ್ಮಣ ತಮ್ಮ ಶಾಲೆಯಲ್ಲಿ ಏರ್ಪಡಿಸುವ ಸ್ಕೌಟ್ ಕಾರ್ಯಕ್ರಮಗಳಿಗೆ ಸಕಲ ಸಹಕಾರ ನೀಡುವುದಾಗಿ ಘೋಷಿಸಿದರು. ರಾಷ್ಟ್ರ ಪ್ರಶಸ್ತಿ ವಿಜೇತ ಹಾಗೂ ಜಿಲ್ಲಾ ಸ್ಕೌಟ್ ಸ್ಥಾನಿಕ ಆಯುಕ್ತ ಎಸ್.ಎಸ್.ಭಟ್ಟ ಲೋಕೇಶ್ವರ ಅಭಿನಂದನಾಪರ ಮಾತನಾಡಿದರು. ತಾಲೂಕಾ ಕಾರ್ಯದರ್ಶಿ ಶಿವಾ ನಾಯ್ಕ ವಂದಿಸಿದರು. ಸ್ಕೌಟ್ ವ್ಯವಸ್ಥಾಪಕಿ ಬೇಬಿ ವೈದ್ಯ ನಿರೂಪಿಸಿದರು.