ಶಿರಸಿ :ಮುಂದಿನ ೨ ರಿಂದ ೩ ತಿಂಗಳಲ್ಲಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ತಾಲೂಕಿನ ಯಡಳ್ಳಿಯ ಮಾಧ್ಯಮಿಕ ಶಿಕ್ಷಣ ಪ್ರಸಾರ ಸಮಿತಿಯ ವಿದ್ಯೋದಯ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ” ಕೌಶಲ್ಯಾಭಿವೃದ್ಧಿ ಕುರಿತು ಸಮಾಜದ ಗಣ್ಯರ ಜೊತೆ ವಿಚಾರ ಮಂಥನ ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಪ್ರತಿಯೊಂದು ‌ಜಿಲ್ಲೆಗೂ ತರಬೇತಿ ಕೇಂದ್ರದ ಅವಶ್ಯಕತೆಯಿದೆ. ಈಗಾಗಲೇ ೩೮೫ ಕ್ಕೂ ಹೆಚ್ಚಿನ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರ ಸ್ಥಾಪನೆಗೆ ದೆಹಲಿಯಲ್ಲಿ ಸಭೆ ನಡೆಸಿ ನಿರ್ಧರಿಸಲಾಗಿದೆ.‌ಖಂಡಿತ ಸ್ಥಾಪನೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES  ಸಂಘಟನೆಗಳು ಕ್ರೀಡೆಗಳೊಂದಿಗೆ ಸಮಾಜಮುಖಿ ಕೆಲಸಗಳತ್ತ ಮುತುವರ್ಜಿ ವಹಿಸಬೇಕು - ನಾಗರಾಜ ನಾಯಕ ತೊರ್ಕೆ

ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸಾಧಾರಣ ತರಬೇತಿ ನೀಡುವ ಕೇಂದ್ರ. ಇಲ್ಲಿ ಉನ್ನತ ಮಟ್ಟದ ತರಬೇತಿ ನೀಡಲು ಸಾಧ್ಯವಿಲ್ಲ. ೩, ೬ ಅಥವಾ ೧ ವರ್ಷದ ಒಳಗಿನ ತರಬೇತಿ ಇಲ್ಲಿ ಸಿಗುತ್ತದೆ. ಇಲ್ಲಿ ಸಿಲಾಬಸ್ ಶೆ.೩೦ ರಷ್ಟಾದರೆ‌ ಅನುಭವ ಶೆ.೭೦ ರಷ್ಟು ಕಲಿಸಲಾಗುತ್ತದೆ. ಸರ್ಟಿಫಿಕೇಟ್ ಕೋರ್ಸಗಳು ಎಲ್ಲೆಡೆ ಇದೆ. ಆದರೆ ಅದರಿಂದ ಬದುಕು ಕಟ್ಟಲು ಸಾಧ್ಯವಿಲ್ಲ. ಅನುಭವ ಮುಖ್ಯ. ಕೌಶಲ್ಯ ಬೇಕು. ಆದ್ದರಿಂದ ಇಲ್ಲಿ ತರಬೇತಿಯ ಜೊತೆಗೆ ಅನುಭವ ನೀಡುತ್ತೇವೆ ಎಂದ ಅವರು, ಇಲ್ಲಿ ಪ್ರತ್ಯಕ್ಷವಾಗಿ ತರಬೇತಿ ನೀಡಲಾಗುತ್ತದೆ. ‌ಇಲ್ಲಿ ತರಬೇತಿ ಉಚಿತವಾಗಿ ಸಿಗುತ್ತದೆ. ಕೆಲಸ ಮಾಡುತ್ತಾ ತರಬೇತಿ ಪಡೆಯಲೂ ಸಾಧ್ಯವಾಗುತ್ತದೆ. ಆದ ಕಾರಣ ಇದನ್ನು ಎಲ್ಲಾ ಕಡೆಗಳಲ್ಲಿ ಜಾರಿಗೆ ‌ತರಲಾಗುತ್ತಿದೆ ಎಂದರು.

RELATED ARTICLES  ಬೆಂಕಿ ತಗುಲಿ ಹೊತ್ತಿ ಉರಿದ ಲಾರಿ.

ಇದೇ ವೇಳೆ ಯಡಳ್ಳಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸಚಿವರು ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ನಾಗ್ವೇಣಿ ಹರಿಜನ, ಉಷಾ ಹೆಗಡೆ, ಚಂದ್ರು ಎಸಳೆ, ಎಸ್.ಆರ್.ಹೆಗಡೆ, ಕೌಸ್ತವ್ ನಾಥ್ ಇದ್ದರು.