ಕಾರವಾರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಜಿಲ್ಲಾ ಸಚಿವ ಆರ್. ವಿ. ದೇಶಪಾಂಡೆ ಫೆಬ್ರುವರಿ 25 ಮತ್ತು 26 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.

ಫೆ.25 ರಂದು ಮಧ್ಯಾಹ್ನ 12ಗಂಟೆಗೆ ಹಳಿಯಾಳ ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲ್ಲಿ ಭಾಗವಹಿಸುವರು. ಮಧ್ಯಾಹ್ನ 1 ಕ್ಕೆ ಹಳಿಯಾಳದಲ್ಲಿ ಪತ್ರಿಕಾಗೋಷ್ಠಿ ನಡೆಸುವರು. 2.30ಕ್ಕೆ ಜೋಯಿಡಾದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಮಾವೇಶ ಹಾಗೂ ಸಮುದಾಯ ಭವನದ ಶಿಲಾನ್ಯಾಸ ಮತ್ತು 94 (ಸಿ) ಪಟ್ಟ ವಿತರಣೆಕಾರ್ಯಕ್ರಮದಲ್ಲಿ ಭಾಗವಹಿಸುವರು.

3.15ಕ್ಕೆ ಗುಂದ್ ಪ್ರಾಥಮಿಕ ಆರೋಗ್ಯಕೇಂದ್ರ ಉದ್ಘಾಟಿಸಿ ಕುಡಿಯುವ ನೀರು ಕಾಮಗಾರಿಗೆ ಶಿಲಾನ್ಯಾಸ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುರು. ಸಂಜೆ 4 ಗಂಟೆಗೆ ಉಳವಿ ಗ್ರಾಮದಲ್ಲಿ ಕೈಗಾರಿಕೆ ಇಲಾಖೆಗಳ ಮನೆಗಳಿಗೆ ಪಟ್ಟ ವಿತರಣೆ, ಪ್ರವಾಸಿ ಮಂದಿರ ಉದ್ಘಾಟನೆ, ಪಿ.ಎಂ.ಜಿ.ಎಸ್.ವೈ ರಸ್ತೆ ಕಾಮಗಾರಿ ಚಾಲನೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ, ಕುಡಿಯುವ ನೀರಿಗೆ ಶಿಲಾನ್ಯಾಸ, ಉಳವಿ ಸ್ವಾಗತ ಕಮಾನು ಕಾಮಗಾರಿಗೆ ಶಿಲಾನ್ಯಾಸ ಹಾಗೂ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 6 ಕ್ಕೆಕೇರವಡಿ ಸೇತುವೆ ಕಾಮಗಾರಿಗೆ ಚಾಲನೆ ನೀಡುವುರು.

RELATED ARTICLES  ಬೈಕ್ ಸವಾರನ ಮೇಲೆ ಹರಿದ ಬಸ್ : ನವ ವಿವಾಹಿತ ಸಾವು.

6.30 ಕ್ಕೆ ಕಾರವಾರದಲ್ಲಿ ರಾಕ್‍ಗಾರ್ಡನ್ ಮತ್ತು, ಎಲ್. ಇ. ಡಿ. ವಾಲ್ ಉದ್ಘಾಟಿಸುವರು. ಹಾಗೂ ಐ. ಆರ್. ಬಿ ಕಂಪನಿಯ ವತಿಯಿಂದ ಪ್ರಾಥಮಿಕ ಶಾಲೆ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 7.30 ಕ್ಕೆ ಕಾರವಾರ ಮತ್ತು ಹಳಿಯಾಳ ಮತಕ್ಷೇತ್ರದ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಕುರಿತಂತೆ ಪರಿಶೀಲನಾ ಸಭೆ ನೆಡೆಸುವರು.

RELATED ARTICLES  ಭಟ್ಕಳದಲ್ಲಿ ಜಿ.ಎಸ್.ಬಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಪನ್ನ.

ಫೆ. 26 ರಂದು ಬೆಳಗ್ಗೆ 9 ಕ್ಕೆ ದಾಂಡೇಲಿಯಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯ ಮನೆಗಳಿಗೆ ಪಟ್ಟ ವಿತರಣೆ ಹಾಗೂ ಜಿ+2 ಮನೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವರು. 11 ಗಂಟೆಗೆ ಅಡಿಗೇರಾ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಮಧ್ಯಾಹ್ನ 12 ಕ್ಕೆ ಭಾಗಮತಿಗ್ರಾಮದಲ್ಲಿ ಗೌಳಿ ಸಮುದಾಯ ಭವನದ ಶಿಲಾನ್ಯಾಸ ಹಾಗೂ ಮನೆ ದುರಸ್ತಿಗಾಗಿ ಚೆಕ್ ವಿತರಣಾಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1.30ಕ್ಕೆ ಹಳಿಯಾಳದಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಮತ್ತು ಪಟ್ಟಣದ ಆಶ್ರಯ ಸಮಿತಿ ಸಭೆಯಲ್ಲಿ ಭಾಗವಹಿಸುವರು. 3.30 ಕ್ಕೆ ಕೆ.ಕೆ ಹಳ್ಳಿ ಮಠದರಥೋತ್ಸವಕಾರ್ಯಕ್ರಮದಲ್ಲಿ ಭಾಗವಹಿಸುವರು.