ಶಿರಸಿ: ಪುಸ್ತಕ ಬಿಡುಗಡೆ, ಪುಸ್ತಕಾವಲೋಕನ ಹಾಗೂ ವಾದನ, ಗಾಯನ ನರ್ತನ ಕಾರ್ಯಕ್ರಮ ಫೆ.25ರ ಸಂಜೆ 4ಕ್ಕೆ ನಗರದ ಅರಣ್ಯ ಸಮುದಾಯ ಭವನದಲ್ಲಿ ನಡೆಯಲಿದೆ.

ಪ್ರಜ್ಞಾ ಮತ್ತೀಹಳ್ಳಿ ಅವರ ಬಣ್ಣವೊರೆಸುವ ಎಣ್ಣೆಗನ್ನಡಿ ಕೃತಿಯನ್ನು ನಿವೃತ್ತ ಪ್ರಾಚಾರ್ಯ ಆರ್.ಡಿ.ಹೆಗಡೆ ಆಲ್ಮನೆ ಬಿಡುಗಡೆಗೊಳಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕಿ ವಿಜಯನಳಿನಿ ರಮೇಶ ಅವರ ನೆನೆವನಂದಿನ ಬಾಳ ಚಿತ್ರಣವ ಪುಸ್ತಕಾವಲೋಕನವನ್ನು ಅಕ್ಷತಾ ಹುಂಚದಕಟ್ಟೆ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ಜಯರಾಂ ಹೆಗಡೆ ಅಧ್ಯಕ್ಷತೆವಹಿಸಿಕೊಳ್ಳುವರು.

RELATED ARTICLES  ಗ್ರಾಮ ಒಕ್ಕಲು ಯುವ ಬಳಗದಿಂದ ಆರ್ಥಿಕ ಸಹಾಯ.

ಬಳಿಕ ವಾದನ ಗಾಯನ ನರ್ತನ ಎಂಬ ವಿಶಿಷ್ಟ ಕಾರ್ಯಕ್ರಮ ಭಾಗವತಿಕೆಯಲ್ಲಿ ಕೇಶವ ಹೆಗಡೆ ಕೊಳಗಿ ಭಗವತಿಕೆ, ಮದ್ದಲೆಯಲ್ಲಿ ಶಂಕರ ಭಾಗವತ್, ಕೊಳಲಿನಲ್ಲಿ ಪ್ರಕಾಶ ಹೆಗಡೆ ಕಲ್ಲಾರೆಮನೆ, ತಬಲಾದಲ್ಲಿ ವಿನಾಯಕ ನಾಯಕ ಮುಂಬೈ, ಚಂಡೆಯಲ್ಲಿ ಗಣೇಶ ಗಾಂವಕರ್, ಯಕ್ಷ ನೃತ್ಯದಲ್ಲಿ ತುಳಸಿ ಹೆಗಡೆ, ಪ್ರಸಾದನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರದಲ್ಲಿ ನಡೆಯಲಿದೆ.

RELATED ARTICLES  ಭಂಡಾರಿ ಸಮಾಜದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಿವಾನಂದ ಹೆಗಡೆ ಕಡತೋಕಾ