ಹೊನ್ನಾವರ: ಅರಣ್ಯ ಇಲಾಖೆಯ ಹೊನ್ನಾವರ ಅರಣ್ಯ ವಿಭಾಗ,ಕಾಮಕೋಡ ಪರಿಸರ ಕೂಟ,ಕಸಾಪ ಹೊನ್ನಾವರ ಘಟಕ,ಎಸ್‍ಡಿಎಂ ಕಾಲೇಜಿನ ಬಯೋ ಕ್ಲಬ್,ರೊಟರ್ಯಾಕ್ಟ್,ಎನ್‍ಎಸ್‍ಎಸ್ ಹಾಗೂ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಪ್ರಕೃತಿ ಶಿಬಿರ ಮತ್ತು ‘ಕಾಡು ಬೆಳದಿಂಗಳಲ್ಲಿ ಭಾವಲಹರಿ’ ಎಂಬ ವೈಶಿಷ್ಟ್ಯಪೂರ್ಣ ಪರಿಸರ ಸ್ನೇಹಿ ಸಾಂಸ್ಕøತಿಕ ಕಾರ್ಯಕ್ರಮ ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ದೇವರಕಾಡಿನಲ್ಲಿರುವ ಶ್ರೀ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಫೆ.25ರಂದು ನಡೆಯಲಿದೆ.
ಬೆಳಿಗ್ಗೆ 10ಕ್ಕೆ ವಿದ್ಯಾರ್ಥಿಗಳಿಗಾಗಿ ನಡೆಯುವ ಪ್ರಕೃತಿ ಶಿಬಿರದಲ್ಲಿ ಎಸಿಎಫ್ ನಂದೀಶ ಎಲ್,ಆರ್‍ಎಫ್‍ಓ ರವೀಂದ್ರ ಪಿ.ಸಿ. ಹಾಗೂ ವಿಜ್ಞಾನಿ ಡಾ.ಜಿ.ಆರ್.ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು.
ಮಧ್ಯಾಹ್ನ 3ಕ್ಕೆ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ,ಡಾ.ಶ್ರೀಪಾದ ಭಟ್ಟ ಕಡತೋಕಾ ಅವರಿಂದ ಭಜನ್ ಹಾಗೂ ಲಘು ಸಂಗೀತ ನಡೆಯುವುದು.
ಸಂಜೆ 5ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಚನ್ನಕೇಶವ ರೆಡ್ಡಿ,ಉಪ ಅರಣ್ಯ ಸಂರಂಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ. ಹಾಗೂ ಪ್ರಾಚಾರ್ಯ ಡಾ.ಎಸ್.ಎಸ್.ಹೆಗಡೆ ಪಾಲ್ಗೊಳ್ಳುವರು.
ಸಂಜೆ 6ಕ್ಕೆ ಕೆ.ಆರ್.ಶ್ರೀಲತಾ ಅವರಿಂದ ಶಾಸ್ತ್ರೀಯ ಹಾಗೂ ಲಘು ಸಂಗೀತ ನಡೆಯಲಿದ್ದು ಗೌರೀಶ ಯಾಜಿ ಕೂಜಳ್ಳಿ(ಹಾರ್ಮೋನಿಯಂ),ಗುರುರಾಜ ಹೆಗಡೆ ಆಡುಕಳ(ತಬಲಾ) ಸಾಥ್ ನೀಡುವರು.
ಸಂಜೆ 7 ಗಂಟೆಗೆ “ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದ್ದುಪ್ರಸನ್ನ ಭಟ್ಟ ಬಾಳ್ಕಲ್(ಭಾಗವತರು),ಗಜಾನನ ಭಂಡಾರಿ ಬೋಳ್ಗೆರೆ(ಮದ್ದಲೆ),ಗಣೇಶ ಗಾಂವ್ಕರ ಯಲ್ಲಾಪುರ(ಚಂಡೆ)ಕೃಷ್ಣಯಾಜಿ ಬಳ್ಕೂರು,ಶಂಕರ ಹೆಗಡೆ ನೀಲ್ಕೋಡ,ಶ್ರೀಧರ ಭಟ್ಟ ಕಾಸರಕೋಡ,ವಿನಯ ಭಟ್ಟ ಬೇರೊಳ್ಳಿ,ನಾಗೇಶ ಗೌಡ ಕುಳಿಮನೆ,ರವಿ ಸಿದ್ದಾಪುರ(ಮುಮ್ಮೇಳ) ಕಲಾವಿದರಾಗಿ ಭಾಗವಹಿಸುವರು.
“ಪ್ರಕೃತಿ,ಸಂಸ್ಕøತಿ ಹಾಗೂ ಆಧ್ಯಾತ್ಮದ ನಡುವಿನ ಸಂಬಂಧವನ್ನು ಅನಾವರಣಗೊಳಿಸುವ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಪ್ರಯತ್ನದ ಅಂಗವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಬೇಕು’ ಎಂದು ಕಾಮಕೋಡ ಪರಿಸರ ಕೂಟದ ಸಂಚಾಲಕ ಪ್ರೊ.ಎಂ.ಜಿ.ಹೆಗಡೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.