ಕಾರವಾರ: ಕಳೆದ ೩೦ ವರ್ಷಗಳಿಂದ ಪರಿಹಾರ ದೊರೆಯದೇ ನಿರಾಶ್ರಿತರು ಅನುಭವಿಸಿದ್ದ ಸಂಕಷ್ಟವನ್ನು ನರೇಂದ್ರ ಮೋದಿ ಆಡಳಿತದಲ್ಲಿ ಕೇಂದ್ರ ಬಿಜೆಪಿ ಸರಕಾರವು ದೂರಮಾಡಿದ್ದು ಶನಿವಾರ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಾಂಕೇತಿಕವಾಗಿ ಪರಿಹಾರದ ಚೆಕ್ ವಿತರಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ನಾಗರಾಜ ನಾಯಕ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರಕಾರವು ನಿಗದಿ ಪಡಿಸಿದ ಅತೀ ಕಡಿಮೆ ದರದ ವಿರುದ್ಧ ನಿರಾಶ್ರಿತರು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಹೆಚ್ಚಿನ ಪರಿಹಾರಕ್ಕಾಗಿ ಪ್ರಕರಣ ೧೮ ಹಾಗೂ ೨೮ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಅಂದಿನ ನ್ಯಾಯಾಧೀಶರಾಗಿದ್ದ ವಿ.ಜಿ.ಸಾವರ್ಕರ ಅವರು ೧೫೦ ರೂ. ಗಳಿದ್ದ ದರವನ್ನು ಪ್ರತಿ ಗುಂಟೆಗೆ ೧೧೫೦೦ ರೂ.ಗಳಿಗೆ ಹೆಚ್ಚಿಸಿ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದ್ದರು ಎಂದು ವಿವರಿಸಿದರು.

RELATED ARTICLES  ಮೊಳಗಿತು ಬಂಡಾಯದ ಕಹಳೆ: ಸೂರಜ್ ನಾಯ್ಕ ಸೋನಿಯವರಿಂದ ಸೋಮವಾರ ನಾಮಪತ್ರ ಸಲ್ಲಿಕೆ!

ಹೆಚ್ಚಿನ ಪರಿಹಾರಕ್ಕಾಗಿ ಸಲ್ಲಿಸಿದವುಗಳಲ್ಲಿ ೧೨೦೪ ಜನರ ಅರ್ಜಿಗಳು ಬಾಕಿ ಇದ್ದವು. ಸೆಕ್ಷನ್ ೧೮ರ ಅಡಿಯಲ್ಲಿ ಈಗಾಗಲೇ ೩೭೩ ಕೋಟಿ ರೂ.ಗಳನ್ನು ಕೋರ್ಟಿನಲ್ಲಿ ಜಮಾ ಮಾಡಲಾಗಿದೆ. ಇನ್ನೂ ೪೫೦ ರಿಂದ ೫೦೦ ಪ್ರಕರಣಗಳು ಬಾಕಿ ಇವೆ. ೭೩ ಕೋಟಿ ರೂ. ಜಮಾ ಆಗಿದೆ.ಅರ್ಗಾ, ಕೊಡಾರ, ಬೆಲೇಕೇರಿ, ಬಿಣಗಾ ಇಲ್ಲಿನ ೩೦ ಪ್ರಕರಣಗಳ ೯೬ ಜನರಿಗೆ ೪,೫೨,೧೨,೯೪೦ ರೂ.ಗಳನ್ನು ಶನಿವಾರ ಸಾಂಕೇತಿಕವಾಗಿ ರಕ್ಷಣಾ ಸಚಿವರು ವಿತರಿಸಲಿದ್ದಾರೆ ಎಂದರು.

RELATED ARTICLES  ಸಮುದ್ರ ಪಾಲಾಗುತ್ತಿದ್ದ ತಾಯಿ ಮಗನ ರಕ್ಷಣೆ.