ಹಿಂದೂ ಜನಜಾಗೃತಿ ಸಮಿತಿಯು ಕಳೆದ 10 ವರ್ಷಗಳಿಂದ ಹಿಂದುತ್ವದ ರಕ್ಷಣೆಗಾಗಿ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಧರ್ಮಜಾಗೃತಿ ಸಭೆಗಳ ಆಯೋಜನೆ ಮಾಡುತ್ತಿದೆ. ಈ ಧರ್ಮ ಸಭೆಗಳ ಉದ್ದೇಶ ರಾಜಕೀಯವಲ್ಲ, ಬದಲಾಗಿ ಹಿಂದೂ ಧರ್ಮದ ಮೇಲಾಗುತ್ತಿರುವ ವಿವಿಧ ಆಕ್ರಮಣಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು, ಜೊತೆಗೆ ಹಿಂದೂ ಧರ್ಮೀಯರಲ್ಲಿ ಸ್ವಧರ್ಮದ ಬಗ್ಗೆ ಸ್ವಾಭಿಮಾನವನ್ನು ಜಾಗೃತಗೊಳಿಸುವುದು, ಇದೇ ಈ ಸಭೆಗಳ ಪ್ರಮುಖ ಉದ್ದೇಶವಾಗಿದೆ. ಧರ್ಮದ ಅಧಿಷ್ಠಾನವಿರುವ ಈ ಸಭೆಗಳನ್ನು ಇದುವರೆಗೆ 13 ರಾಜ್ಯಗಳಲ್ಲಿ, 7 ಭಾಷೆಗಳಲ್ಲಿ ಮತ್ತು 1500 ಕ್ಕೂ ಅಧಿಕ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ. 15 ಲಕ್ಷಕ್ಕಿಂತಲೂ ಆಧಿಕ ಜನರಲ್ಲಿ ಸ್ವಧರ್ಮದ ಬಗ್ಗೆ ಸ್ವಾಭಿಮಾನವನ್ನು ಜಾಗೃತ ಮಾಡುವ ಮೂಲಕ ಸಭೆಯ ಉದ್ದೇಶವು ಸಫಲವಾಗುತ್ತಿದೆ.
ಈ ಧರ್ಮಸಭೆಗಳು ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿವೆ. ಇಂದು ರಾಜ್ಯದಲ್ಲಿ ಹಿಂದುತ್ವಕ್ಕಾಗಿ ಕಾರ್ಯ ಮಾಡುವ ಹಿಂದುತ್ವವಾದಿ ನೇತಾರರನ್ನು ಮತಾಂಧ ಜಿಹಾದಿಗಳು ವ್ಯವಸ್ಥಿತವಾಗಿ ಹತ್ಯೆ ಮಾಡುವ ಮೂಲಕ ಹಿಂದೂ ಚಳುವಳಿಯನ್ನು ಹತ್ತಿಕ್ಕುವ ಕೃತ್ಯ ಮಾಡುತ್ತಿವೆ.
ಅದೇ ರೀತಿ ರಾಜ್ಯ ಸರಕಾರವು ಧರ್ಮದ್ರೋಹಿಗಳ ಒತ್ತಡಕ್ಕೆ ಮಣಿದು “ಮೂಢನಂಬಿಕೆ ವಿಧೇಯಕ”ದ ಮೂಲಕ ಹಿಂದೂಗಳ ರೂಢಿ, ಪರಂಪರೆ, ಹಬ್ಬ್ಬ, ಉತ್ಸವ, ವೃತ-ವೈಕಲ್ಯ, ಆಚರಣೆಗಳನ್ನು ಕಾನೂನು ಬದ್ಧವಾಗಿ ನಿಷೇಧಿಸುವ ಪ್ರಯತ್ನಕ್ಕೆ ಮುಂದಾಗಿದೆ. ಅಲ್ಪಸಂಖ್ಯಾತರ ಉದ್ಧಾರಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಬಜೆಟನಲ್ಲಿ ತೆಗೆದಿಡುವ ಸರಕಾರ ಹಿಂದೂ ದೇವಸ್ಥಾನಗಳನ್ನು ದುರ್ಲಕ್ಷಿಸಿರುವುದು ದುರ್ದೈವ್ಯದ ಸಂಗತಿಯಾಗಿದೆ.
ರಾಜ್ಯ ಸರಕಾರ ಜಾತ್ಯತೀತ ಹೆಸರಿನಲ್ಲಿ ಹಿಂದೂ ದೇವಸ್ಥಾನಗಳ ಜಾತ್ರೆಯಲ್ಲಿ ಅನ್ಯಮತೀಯರ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಧರ್ಮದ್ರೋಹದ ಕೃತ್ಯವನ್ನು ಎಸಗುತ್ತಿದೆ.
ದೇಶದಲ್ಲಿ ಧರ್ಮದ್ರೋಹಿಗಳ ಅಟ್ಟಹಾಸ ನಡೆಯುತ್ತಿದೆ. ಅದೇ ರೀತಿ ಐಎಸ್‍ಐಎಸ್ ಎಂಬ ಜಿಹಾದಿ ಜಾಲ ದೇಶವ್ಯಾಪಿ ಹಬ್ಬಿದೆ.
ಹಾಗಾಗಿ ಈ ಎಲ್ಲಾ ಸಮಸ್ಯೆಗಳನ್ನು ದೂರಮಾಡಲು ಜಾತ್ಯತೀತ ವ್ಯವಸ್ಥೆಯಲ್ಲ, ಬದಲಾಗಿ `ಹಿಂದೂ ರಾಷ್ಟ್ರ’ ಸ್ಥಾಪನೆಯೇ ಪರ್ಯಾಯವಾಗಿದೆ. ಹಿಂದೂ ರಾಷ್ಟ್ರವೇ ಎಲ್ಲರನ್ನೂ ಸುಖಿ ಹಾಗೂ ಸಮಾಧಾನದಲ್ಲಿಡುವ ರಾಮರಾಜ್ಯದಂತೆ ಧರ್ಮನಿಷ್ಠ ರಾಜ್ಯವಾಗಿರುವುದು ! ಆದ್ದರಿಂದ ಎಲ್ಲ ಹಿಂದೂಗಳಿಗೆ `ಎದ್ದೇಳಿ ಹಿಂದೂಗಳೇ, ಜಾಗೃತರಾಗಿರಿ, ನಮ್ಮ ರಾಜ್ಯವನ್ನು ಸ್ಥಾಪಿಸಿರಿ |’ ಎಂಬ ಮೂಲಮಂತ್ರವನ್ನು ನೀಡಲು ಈ ಧರ್ಮಸಭೆಗಳನ್ನು ಆಯೋಜಿಸಲಾಗುತ್ತಿದೆ.
ಧರ್ಮಸಭೆ ಸ್ಥಳ:-
ಶ್ರೀ ಲಕ್ಷ್ಮೀನಾರಾಯಣ ಸಭಾಭವನ, ದುರ್ಗಾಕೇರಿ, ಹೊನ್ನಾವರ, ದಿನಾಂಕ:-25.02.2018 ರ ರವಿವಾರ, ಸಮಯ:- ಸಂಜೆ 4.30 ಗಂಟೆಗೆ
ಈ ಸಭೆಯಲ್ಲಿ ಹಿಂದೂ ಧಾರ್ಮಿಕ ನೇತಾರರು, ಧರ್ಮಜಾಗೃತಿ, ರಾಷ್ಟ್ರಜಾಗೃತಿ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆ ಉದ್ದೇಶದಿಂದ ಮಾರ್ಗದರ್ಶನ ಮಾಡಲಿದ್ದಾರೆ. ಅದರೊಂದಿಗೆ ಧರ್ಮಶಿಕ್ಷಣ ಮತ್ತು ಧರ್ಮಜಾಗೃತಿ ಹಾಗೂ ಧರ್ಮದ ಮೇಲಿನ ಆಘಾತಗಳ ವಿಷಯದಲ್ಲಿ ಅಮೂಲ್ಯ ಫ್ಲ್ಲೆಕ್ಸ್ ಪ್ರದರ್ಶನ ಮತ್ತು ಗ್ರಂಥ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಸಮಸ್ತ ಹಿಂದೂ ಬಾಂಧವರು ಹಾಗೂ ಧರ್ಮಾಭಿಮಾನಿಗಳು ಹೆಚ್ಚೆಚ್ಚು
ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ತಮ್ಮ ಧರ್ಮಕರ್ತವ್ಯವನ್ನು ನಿಭಾಯಿಸಬೇಕೆಂದು ಸಮಿತಿಯು ಕರೆ ನೀಡುತ್ತಿದೆ.