ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ಅಂಕೋಲಾ ತಾಲೂಕಿನ 13 ಗ್ರಾಮಗಳಲ್ಲಿ ಭಾರತೀಯ ರಕ್ಷಣಾ ಸಚಿವಾಲಯದಿಂದ ನೌಕಾ ನೆಲೆಯನ್ನು ಸ್ಥಾಪಿಸುವ ಉದ್ದೇಶದಿಂದ 2412 ಎಕರೆ 15 ಗುಂಟೆ 17 ಅನೆ ಖಾಸಗಿ ಜಮೀನನ್ನು 1988 ರಿಂದ 2000 ರವರೆಗೆ ಸ್ವಾದೀನ ಪಡಿಸಿಕೊಂಡಿದ್ದು ಮತ್ತು ಮಾಜಿ ಭೂ ಮಾಲೀಕರು ಮತ್ತು ಅವರ ಅವಲಂಭಿತ ಕುಟುಂಬದವರಿಗೆ 126 ಕೋಟಿ ರೂಪಾಯಿಗಳಲ್ಲಿ 22.55 ಕೋಟಿ ರೂ ಪರಿಹಾರ ಮೊತ್ತವನ್ನು ನೀಡಲಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಸೀಬರ್ಡ್ ನಿರಾಶ್ರಿತರಿಗೆ ಇಲ್ಲಿನ ಜಿಲ್ಲಾ ರಂಗಮಂದಿದರಲ್ಲಿ ಶನಿವಾರ ಹೆಚ್ಚುವರಿ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಅವರು,ಈ ಪರಿಹಾರ ಮೊತ್ತಕ್ಕೆ ಸಂತೃಪ್ತಿ ಹೊಂದದ ಮಾಜಿ ಭೂ ಮಾಲಿಕರು ಕಾರಾವಾರ ವಿಶೇಷ ಭೂ ಸ್ವಾದೀನ ಅಧಿಕಾರಿಗೆ ಭೂ ಅತೀಕ್ರಮಣ ಕಾಯ್ದೆ 1894 ರನ್ವಯ ಪರಿಹಾರ ಮೊತ್ತಕ್ಕೆ ದಾವೆ ಹೂಡಿದ್ದರಿಂದ ಸುಪ್ರೀಂ ಕೋರ್ಟ ಪ್ರತಿ ಎಕರೆಗೆ 4.60 ಲಕ್ಷ ರೂ ಗಳನ್ನು ನೀಡಬೇಕೆಂದು ಆದೇಶ ನೀಡಿದೆ.

RELATED ARTICLES  ಒಮ್ಮೆ ಹಳೆಯ ನೆನಪು ಮಾಡಿತ್ತೇ ಇಂದಿನ ಬರ್ಗಿ ಟ್ಯಾಂಕರ್ ಪಲ್ಟಿ?

ಸುಪ್ರೀಂ ಕೋರ್ಟ ಆದೇಶದನ್ವಯ ಭಾರತ ರಕ್ಷಣಾ ಸಚಿವಾಲಯವು 1008 ಪ್ರಕರಣಗಳಿಗೆ ಇವರೆಗೆ 380.42 ಕೋಟಿ ಪರಿಹಾರ ಮೊತ್ತವನ್ನು ವಿಶೇಷ ಭೂ ಸ್ವಾಧಿನ ಅಧಿಕಾರಿಗಳು ವಿತರಿಸಿದ್ದಾರೆ ಅರ್ಜಿಯನ್ನು ಭರ್ತಿ ಮಾಡಿದ ಮಾಜಿ ಭೂ ಮಾಲಿಕರಿಗೆ ಯು/ಎಸ್ 28 ಎ ಕಾಯ್ದೆ ಪ್ರಕಾರ ಸಚಿವಾಲಯದಿಂದ 858 ಪ್ರಕರಣಗಳಲ್ಲಿ 207.11 ಕೋಟಿ ಮೊತ್ತವನ್ನು ನೀಡಿದೆ. ಬೆಂಗಳೂರಿನ ಡಿ.ಇ.ಎಮ್ ಕಚೇರಿಯಿಂದ 2018 ಫೆ.23 ರಂದು 154 ಕೋಟಿ ಪರಿಹಾರ ಮೊತ್ತವನ್ನು ವಿಶೇಷ ಭೂ ಸ್ವಾಧೀನ ಕಚೇರಿ ಕಾರವಾರ ರವರಿಗೆ ತಲುಪಿಸಿದ್ದು ಉಳಿದ 53.11.58.544 ರೂ ಗಳನ್ನು ಈ ತಿಂಗಳ ಅಂತ್ಯದೊಳಗೆ ನೀಡಲಾಗುತ್ತದೆ ಎಂದರು.

RELATED ARTICLES  ಕುಮಟಾದಲ್ಲೊಂದು ಅಪಘಾತ : ಸಿನಿಮೀಯ ರೀತಿಯಲ್ಲಿ ಇಬ್ಬರು ಬಚಾವ್..!

ಒಟ್ಟು 587 ಕೋಟಿ ರೂ. ಗಳಲ್ಲಿ ( 18(1), ಮತ್ತು 28 (ಎ)) ಸೇರಿದಂತೆ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಈಗಾಗಲೇ 534 ಕೋಟಿ ರೂ ಗಳನ್ನು ವಿಶೇಷ ಭೂ ಸ್ವಾಧೀನ ಇಲಾಖೆಗೆ ನೀಡಲಾಗಿದೆ ಮತ್ತು ಉಳಿದ 53 ಕೋಟಿ ರೂಪಾಯಿಗಳನ್ನು 2018 ಫೆಬ್ರುವರಿ ತಿಂಗಳಳೊಗೆ ವಿತರಿಸಲಾಗುತ್ತದೆ ಎಂದು ಭರವಸೆ ನೀಡಿದರು.