ಶ್ರೀ ಚಕ್ರಖಂಡೇಶ್ವರ ಕ್ರಿಕೇಟ್ ಕ್ಲಬ್ ಹನೇಹಳ್ಳಿ ಇವರ ಆಶ್ರಯದಲ್ಲಿ ಮುಕ್ತ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದ್ದು. ಈ ಪಂದ್ಯಾವಳಿಯ ಸಮಾರೋಪ ಸಮಾರಂಭವು ಬಂಕಿಕೊಡ್ಲದ ಆನಂದಾಶ್ರಮ ಪೌಢಶಾಲಾ ಮೈದಾನದಲ್ಲಿ ಯಶಸ್ವಿಯಾಗಿ ಜರುಗಿತು.
ಬಹುಮಾನ ವಿತರಕರಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಅತ್ಯುತ್ತಮ ಸಂಘಟನೆಯೊಂದಿಗೆ ಯಶಸ್ವಿಯಾಗಿ ಈ ಪಂದ್ಯಾವಳಿಯು ಜರುಗಿದೆ. ಸಮಾಜದಲ್ಲಿ ಜನರು ಪರಸ್ಪರ ಬೆರೆಯಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿದೆ. ಯುವ ಜನತೆಯಲ್ಲಿ ಅದ್ಭುತವಾದ ಶಕ್ತಿಯಿದ್ದು ಅದನ್ನು ಸರಿಯಾದ ದಿಶೆಯಲ್ಲಿ ಪ್ರದರ್ಶಿಸಬೇಕು. ಯುವ ಜನತೆ ಸುಸಂಸ್ಕ್ರತರು ದೇಶಪ್ರೇಮಿಗಳು ಹಾಗೂ ನಮ್ಮ ಧಮ9ದ ಮೇಲೆ ಅಪಾರ ಗೌರವ ಅಭಿಮಾನ ಹೊಂದಿದವರು ಆಗಿರಬೇಕು. ನಮ್ಮ ದೇಶ ಹಾಗೂ ನಮ್ಮ ಧಮ9ದ ಮೇಲೆ ಇತರೇಡೆಯಿಂದ ಪ್ರಹಾರ ನಡೆದಾಗ ನಾವು ಒಗ್ಗಟ್ಟಾಗಿ ಸಿಡಿದ್ದೆದ್ದು ದೇಶ ಹಾಗೂ ಧರ್ಮದ ರಕ್ಷಣೆಗೆ ಮುಂದಾಗಬೇಕು. ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ ಭಾಗ್ಯವಾಗಿದೆ. ಹಾಗಾಗಿ ನಾವೆಲ್ಲ ಆರೋಗ್ಯದಿಂದಿರಲು ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯರಾಗಬೇಕು. ಆಗ ಮಾತ್ರ ನಾವು ಉತ್ತಮ ದೈಹಿಕ ಆರೋಗ್ಯ ಹೊಂದುವುದರೊಂದಿಗೆ ಸ್ಥಿರವಾದ, ಧನಾತ್ಮಕವಾದ ಚಿಂತನೆಗಳನ್ನು ಬೆಳೆಸಿಕೊಳ್ಳಲು ಸಾಧ್ಯ. ಮುಂದಿನ ದಿನಗಳಲ್ಲಿ ಈ ಭಾಗಗಳಲ್ಲಿ ಹೆಚ್ಚೆಚ್ಚು ಇಂತಹ ಕಾರ್ಯಕ್ರಮಗಳು ಜರುಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಗತಿ ವಿದ್ಯಾಲಯದ ಪ್ರಾಚಾರ್ಯರಾದ ಎಮ್.ಜಿ.ಭಟ್ಟ, ನಾಡುಮಾಸ್ಕೇರಿ ಗ್ರಾಂ.ಪ. ಸದಸ್ಯರಾದ ಶ್ರೀನಿವಾಸ ದೇವಣ್ಣ ನಾಯಕ, ಬೆಳಕು ಟ್ರಸ್ಟ ಕಾರ್ಯದರ್ಶಿ ಅರುಣ ಕವರಿ ತೊಕೆ, ಮಿರ್ಜಾನ್ ಶಕ್ತಿ ಕೇಂದ್ರದ ಅಧ್ಯಕ್ಷರಾದ ವೆಂಕಟ್ರಮಣ ಕವರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.