ಕುಮಟಾ : ತಾಲೂಕಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ಬಾಡದ ಗುಡೇಅಂಗಡಿಯ ರಥಬೀದಿಯ ಶ್ರೀ ಕಾಂಚಿಕಾಂಬಾ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು.

ಮನಸೂರೆಗೊಂಡ ಸ್ವಾಗತ

ಬಾಲ ಪ್ರತಿಭೆಗಳ ಯಕ್ಷನೃತ್ಯದ ಮೂಲಕ ಅತಿಥಿ ಅಭ್ಯಾಗತರತರನ್ನು ವೇದಿಕೆಗೆ ಆಮಂತ್ರಿಸಿದ್ದು ಎಲ್ಲರಲ್ಲೂ ರೋಮಾಂಚನ ಉಂಟುಮಾಡಿತ್ತು. ಪುಟ್ಟು ಪುಟಾಣಿಗಳು ಯಕ್ಷಗಾನದ ಮೂಲಕ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಹೃದಯಸ್ಪರ್ಶಿಯಾಗಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ‌ಶಾಲೆ ಬಾಡ ಗುಡೇಅಂಗಡಿಯ ಶಿಕ್ಷಕ ಶಿಕ್ಷಕಿಯರ ಪ್ರಾರ್ಥನೆ ಹಾಗೂ ನಾಡಗೀತೆ ಮನಮೋಹಕವಾಗಿ ಮೂಡಿಬಂದಿತ್ತು.
ಜಿ.ಪಂ ಸದಸ್ಯರು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ರತ್ನಾಕರ ನಾಯ್ಕ ಮನದುಂಬಿ ಎಲ್ಲರನ್ನೂ ಸ್ವಾಗತಿಸಿದರು.

ಪುಸ್ತಕ ಬಿಡುಗಡೆ.

ಪಂಪ ಪ್ರಶಸ್ತಿ ವಿಜೇತ ಕವಿ ಡಾ.ಬಿ ಎ ಸನದಿಯವರು ವೆಂಕಟೇಶ ಬೈಲೂರು ಅವರ ‘ಹೊಸ ಬೆಳಕಿನ ಬೀಜಗಳು’ ಹಾಗೂ ಹಾಗೂ ಶ್ರೀಮತಿ ಗಾಯತ್ರಿ ಕಾಮತ್ ಅವರ ‘ಬಾನಹಕ್ಕಿ’ ಕವನ ಸಂಕಲನ ಬಿಡುಗಡೆಗೊಳಿಸಿದರು.

ಮಹಾದ್ವಾರಗಳು.

ಯಕ್ಷಗಾನಲೋಕದ ಮೇರು ಕಲಾವಿದರಾಗಿದ್ದ ಪದ್ಮಶ್ರೀ ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ ಮಹಾದ್ವಾರ ಎಲ್ಲರನ್ನು ಆಕರ್ಷಿಸಿದ್ದು ವಿಶೇಷ. ದಿ ನಾರಾಯಣ ಅಂಗಡಿಕೇರಿಯವರ ಉಪದ್ವಾರ ಸಮ್ಮೇಳದ ಕಳೆ ಹೆಚ್ಚಿಸಿತ್ತು. ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಜಗನ್ನಾಥ ನಾಯ್ಕ ದ್ವಾರಗಳನ್ನು ಪರಿಚಯಿಸಿದರು.

RELATED ARTICLES  ಸ್ವಾತಂತ್ರ್ಯ ದಿನಾಚರಣೆಯಂದು ಚಿದಾನಂದ ಭಂಡಾರಿಯವರ ಕೊಂಕಣಿ ದೇಶಭಕ್ತಿ ಗೀತೆ ಲೋಕಾರ್ಪಣೆ.

ಆಶಯ ನುಡಿ

ಸಮ್ಮೇಳನದ ಆಶಯ ನುಡಿ ಹಂಚಿಕೊಂಡ ಜಿಲ್ಲಾ ಕಸಾಪ ಅಧ್ಯಕ್ಷರಾದ ಶ್ರೀ ಅರವಿಂದ ಕರ್ಕಿಕೋಡಿ ಎಂದೂ ಆಗದ ಕನ್ನಡದ ಹಬ್ಬ ಬಾಡದಲ್ಲಿ ವೈಭವದಿಂದ ನಡೆಯುತ್ತಿದೆ. ಅಮೇರಿಕಾದ ಅಧ್ಯಕ್ಷ ಟ್ರಂಪ್ ಕನ್ನಡ ನಾಡನ್ನು ತಮ್ಮ ಪ್ರಣಾಳಿಕೆಯಲ್ಲಿ ಹೆಸರಿಸಿದ ಎಂದರೆ ಕನ್ನಡ ಎಷ್ಟು ಬೆಳೆದಿದೆ ಎಂಬುದನ್ನು ಗಮನಿಸಿ ಎಂದರು. ಡಾ ಎಲ್ ಆರ್ ಹೆಗಡೆಯವರನ್ನು ಸ್ಮರಿಸಿದ ಅವರು ಜಾನಪದ ಶೈಲಿ ಹಾಗೂ ಸಂಸ್ಕ್ರತಿಯ ಹರಿವುಗಳು ಇದೆ .ಮುಂದಿನ ಪೀಳಿಗೆಗೆ ಅದು ಹರಿಯಬೇಕು ಮಕ್ಕಳು ಅದನ್ನು ಕಲಿಯಬೇಕು ಎಂದರು. ಶ್ರೀ ಜಯದೇವ ಬಳಗಂಡಿ ಯವರು ಇತ್ತೀಚೆಗೆ ಅಭಿನಯಿಸಿದ “ವರ್ತಮಾನ” ಕಿರು ಚಿತ್ರ ವನ್ನು ಉಲ್ಲೇಖಿಸಿದ ಅವರು ಬಳಗಂಡಿಯವರ ಅಭಿನಯ ಹಾಗೂ ಅದು ಕೊಡುವ ಸಂದೇಶವನ್ನು ಮನಸಾರೇ ಮೆಚ್ಚಿ ಸಂತಸ ಹಂಚಿಕೊಂಡರು..

ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರಾದ ಶ್ರೀ ಜಿ.ಎಲ್‌ ಹೆಗಡೆ ಸಮ್ಮೇಳನ ‌ಅಧ್ಯಕ್ಷರಾದ ಶ್ರೀ ದಯಾನಂದ ತೊರ್ಕೆಯವರಿಗೆ ಕನ್ನಡ ಧ್ವಜವನ್ನು ಹಸ್ತಾಂತರಿಸಿದರು.

RELATED ARTICLES  ವ್ಯಕ್ತಿಯಮೇಲೆ ದಾಳಿ ಮಾಡಿದ ಕರಡಿ.

ಅಧ್ಯಕ್ಷರ ನುಡಿ.

ಸಮ್ಮೇಳನಾ ಅಧ್ಯಕ್ಷರಾದ ಶ್ರೀ ದಯಾನಂದ ತೊರ್ಕೆ ಸಪತ್ನಿಕರಾಗಿ ವೇದಿಕೆಯೇರಿ ವೇದಿಕೆಯ ಕಲಾಸಿರಿ ಹೆಚ್ಚಿಸಿದರು. ಕಲೆ ಹಾಗೂ ಕನ್ನಡದ ಉಳಿವಿಗೆ ಕಟಿಬದ್ಧರಾಗಬೇಕಾದ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ನಮ್ಮ ಪ್ರತಿಷ್ಠೆಯ ಪ್ರದರ್ಶನಕ್ಕಾಗಿ ಕನ್ನಡವನ್ನು ಕಡೆಗಣಿಸಬೇಡಿ ಎಂದು ವಿನಂತಿಸಿದ ಅವರು, ಕನ್ನಡಿಗರು ಕನ್ನಡ ಉಳಿಸದೆ ಬೇರಾರು ಕನ್ನಡ ಉಳಿಸಬೇಕು? ಎಂದು ಅವರು ಪ್ರಶ್ನಿಸಿದರು.
ರಾಜ್ಯದ ರಾಜಧಾನಿಯಲ್ಲಿ ಕನ್ನಡ ಹಾಗೂ ಕನ್ನಡಮ್ಮನನ್ನು ಹುಡುಕಬೇಕಾದ ಅನಿವಾರ್ಯತೆಇದೆ ಎಂದು ಖೇದ ವ್ಯಕ್ತಪಡಿಸಿದರು. ತಾಲೂಕು, ಜಿಲ್ಲೆ , ರಾಜ್ಯದಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿದ್ದು ಸಮಾಧಾನ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ‌ ಜಿ.ಪಂ‌ ಸದಸ್ಯರಾದ ಶ್ರೀಮತಿ ಗಾಯತ್ರಿ ಗೌಡ, ಬಿಜೆಪಿ ಪ್ರಮುಖರಾದ ಶ್ರೀ ಸುಬ್ರಾಯ ವಾಳ್ಕೆ, ವೆಂಕಟ್ರಮಣ ಹೆಗಡೆ, ಉಪ ನಿರ್ದೇಶಕರಾದ ಶ್ರೀ ಪಿ.ಕೆ ಪ್ರಕಾಶ, ಶ್ರೀ ಧರ್ಮಸ್ಥಳ ಗ್ರಾ.ಸಂಸ್ಥೆ ಕುಮಟಾದ ಜಿಲ್ಲಾ ನಿರ್ದೇಶಕ ಶ್ರೀ ಲಕ್ಷ್ಮಣ ಎಂ, ಶಿಕ್ಷಕರ ಸಂಘದ ಅಧ್ಯಕ್ಷರಾದ ಆನಂದು ಗಾವ್ಕರ್, ತಾಲೂಕಾ ಪಂಚಾಯತ್ ಸದಸ್ಯರಾದ ಯಶೋಧಾ ಶೆಟ್ಟಿ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.