ಹೊನ್ನಾವರ : ತಾಲೂಕಿನ ಮಾವಿನಕುರ್ವಾ ಶ್ರೀ ನವದುರ್ಗಾ ದೇವರ ಸನ್ನಿಧಿಯಲ್ಲಿ ಪ್ರತಿವರ್ಷ ಪಾಲ್ಗುಣ ಶುದ್ಧ ನವಮಿಯಂದು ಶನಿವಾರ ಶ್ರೀ ದೇವರ ವರ್ಧಂತಿ ಉತ್ಸವ ನಡೆಯಿತು. ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಪುಣ್ಯಾಹ ವಾಚನ, ಪಂಚಾಮೃತ ಅಭಿಷೇಕ, ಸಪ್ತಶತಿ ಪಾರಾಯಣ, ವಿಶೇಷ ಪುಷ್ಪಾಲಂಕಾರ, ನವಚಂಡಿ ಹವನ, ಪೂರ್ಣಾಹುತಿ, ಮಹಾ ಮಂಗಳಾರತಿ ನಂತರ ಭಕ್ತರು ಅನ್ನ ಸಂತರ್ಪಣೆ ಪ್ರಸಾದ ಸ್ವೀಕರಿಸಿ ಪುನಿತರಾದರು.
ರಾತ್ರಿ ರಜತ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ಮಂಗಲಾಷ್ಟಕ ಸೇವೆ ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

RELATED ARTICLES  ವಿದ್ಯಾರ್ಥಿ ವಾಹಿನಿ ಹಾಗೂ ಯುವ ವಾಹಿನಿ ಪ್ರತಿಭಾ ದರ್ಶನ ಕಾರ್ಯಕ್ರಮ.

ಶ್ರೀ ದೇವರ ವರ್ಧಂತಿ ಉತ್ಸವದ ನಿಮಿತ್ತ ಊರಿನಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ಅತಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಕಾರ್ಯಕ್ರಮ ನಡೆಯಿತು.

ಮಾವಿನಕುರ್ವಾ ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಬೆಳ್ಳುಕುರ್ವಾ, ಗದ್ದೆಮನೆ, ಸಾನಾಮೋಟಾ ಒಟ್ಟೂ 143 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಕಾರ್ಯದರ್ಶಿ ವಿನಾಯಕ ಆರ್. ಭಟ್, ಸದಸ್ಯರಾದ ವಾಸುದೇವ ಭಟ್, ಜನಾರ್ಧನ ಭಟ್, ಅನಂತ ಭಟ್, ತ್ರಿವಿಕ್ರಮ ನಾಯಕ, ಸುರೇಶ ಶಾನಭಾಗ, ಶಾಲೆಯ ಮುಖ್ಯೋಪಾಧ್ಯಾಯರು ಇತರರು ಉಪಸ್ಥಿತರಿದ್ದರು.

RELATED ARTICLES  ಓಡುತ್ತಿದ್ದ ಬಸ್ ನ ಟೈರ್ ಕಳಚಿತು: ಕುಮಟಾ ಡಿಪೋ ಬಸ್ ಕಥೆ ವ್ಯಥೆ: ಎದುರಾಯ್ತು ಭಾರೀ ಆಪತ್ತು.