ಯಲ್ಲಾಪುರ: ‘ರಾಜಕೀಯ ಕ್ಷೇತ್ರದಲ್ಲಿ ಗಟ್ಟಿ ಕಾಲೂರದ ವ್ಯಕ್ತಿಯೊಬ್ಬರು ಶಾಸಕ ಶಿವರಾಮ ಹೆಬ್ಬಾರ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ’ ಎಂದು ಯುವ ಕಾಂಗ್ರೆಸ್ ವೇದಿಕೆ ಪ್ರತಿಕ್ರಿಯಿಸಿದೆ.

‘ನಿನ್ನೆ-ಮೊನ್ನೆಯಷ್ಟೇ ಬಿಜೆಪಿಗೆ ಸೇರಿದ ಪ್ರಸಾದ ಹೆಗಡೆ ಎಂಬಾತ ಪಕ್ಷದ ತಾಲ್ಲೂಕಿನ ಮಾಧ್ಯಮ ಪ್ರಮುಖನೆಂದು ಬಡಾಯಿ ಕೊಚ್ಚಿಕೊಳ್ಳುತ್ತ, ತಿಳಿವಳಿಕೆ ಕೊರತೆಯಿಂದ ಹೇಳಿಕೆ ನೀಡುತ್ತಿದ್ದಾರೆ. ವಾಸ್ತವ ಸ್ಥಿತಿ ಅರಿಯದೇ ಆಪಾದಿಸುವುದು ಸರಿಯಲ್ಲ. ಒಂದೊಮ್ಮೆ ಆಪಾದನೆ ನಿಜವಾಗಿದ್ದಲ್ಲಿ ದಾಖಲೆ ಸಹಿತ ಆಪಾದಿಸಲಿ’ ಎಂದು ವೇದಿಕೆ ಪ್ರಮುಖರಾದ ಗುರು ಹೆಬ್ಬಾರ, ಶಂಕರ ಹೆಗಡೆ, ಸತೀಶ ನಾಯ್ಕ, ಪ್ರಶಾಂತ ರಾವೋಜಿ, ಬಾಲಕೃಷ್ಣ ನಾಯ್ಕ ಪತ್ರಿಕಾ ಹೇಳಿಕೆಯಲ್ಲಿ ಸವಾಲು ಹಾಕಿದ್ದಾರೆ.

RELATED ARTICLES  ದಿ. ಪಿ. ವಿ. ಹಾಸ್ಯಗಾರ, ಕರ್ಕಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಇಂದು.

‘ಪ್ರಸಾದ ಹೆಗಡೆ ತಕ್ಷಣ ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗುವುದು. ಸುಳ್ಳು ಹೇಳಿಕೆ ಮೂಲಕ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡಿ, ಚುನಾವಣಾ ತಂತ್ರಗಾರಿಕೆ ತೋರುವುದು ಸರಿಯಲ್ಲ’ ಎಂದಿದ್ದಾರೆ.

RELATED ARTICLES  ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ : ವ್ಯಕ್ತಿ ಆಸ್ಪತ್ರೆಗೆ ದಾಖಲು