ಕಾರವಾರ: ಕರ್ನಾಟಕ ಯಕ್ಷಗಾನ ಅಕಾಡೆಮಿಯು 2017-18 ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ 5 ತಿಂಗಳುಗಳ ಕಾಲ ಸಂಶೋಧನಾ ಅಧ್ಯಯನ ಮಾಡಿ ಪ್ರಬಂಧ ಮಂಡಿಸುವವರಿಂದ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನಿಸಿದೆ..

ಆಸಕ್ತ ಅಭ್ಯರ್ಥಿಗಳು ಪರಿಶಿಷ್ಟ ಜಾತಿ(ವರ್ಗಕ್ಕೆ) ಸೇರಿದ್ದು, 45 ವರ್ಷ ವಯೋಮಿತಿ ಒಳಗಿರಬೇಕು. ಯಕ್ಷಗಾನದ ಕಲಾ ಪ್ರಕಾರಗಳಾದ ತೆಂಕುತಿಟ್ಟು, ಬಡಗುತಿಟ್ಟು, ಬಡಾಬಡಗುತಿಟ್ಟು, ತಾಳಮದ್ದಳೆ, ಮೂಡಲಪಾಯ ವಿಷಯಗಳ ಬಗ್ಗೆ ಆಸಕ್ತಿ ಇರುವ ಕನ್ನಡ ಭಾಷಾ ವಿಜ್ಞಾನ, ಜಾನಪದ, ಸಮಾಜ ವಿಜ್ಞ್ಞಾನ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮಹಿಳಾ ಅಧ್ಯಯನ, ಮಾನವ ಶಾಸ್ತ್ರ, ಇತಿಹಾಸ, ಪತ್ರಿಕೋದ್ಯಮ, ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ, ಇಂಗ್ಲೀಷ, ಹಿಂದಿ ಇತ್ಯಾದಿ ವಿಷಯದ ಮೇಲೆ ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿz.É

RELATED ARTICLES  ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.

ಅರ್ಜಿ ಸಲ್ಲಿಸಲು ಮಾರ್ಚ 9 ಕೊನೆಯ ದಿನವಾಗಿದ್ದು ಅಂಚೆ ಅಥವಾ ಇ-ಮೇಲ್ [email protected] ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ. ಆಸಕ್ತರು ಪ್ರಬಂದಕ್ಕೆ ಆಯ್ಕೆ ಮಾಡಿಕೊಳ್ಳುವ ಅಧ್ಯಯನದ ವಿಷಯದ ಮೇಲೆ ನಾಲ್ಕು ಪುಟಗಳ ಸಾರಲೇಖ ಹಾಗೂ ತಮ್ಮ ಸಾಧನೆಯ ಕಿರು ಪರಿಚಯ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ರಿಜಿಸ್ಟ್ರಾರ್ ಕರ್ನಾಟಕ ಯಕ್ಷಗಾನ ಅಕಾಡೆಮಿ, 2ನೇ ಮಹಡಿ, ಚಾಲುಕ್ಯ ವಿಭಾಗ ಕನ್ನಡ ಭವನ, ಜೆ.ಪಿ. ರಸ್ತೆ ಇವರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

RELATED ARTICLES  ಕೌಶಾಲ್ಯಾಭಿವೃದ್ಧಿ ತರಬೇತಿಗೆ ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ.