ಭಟ್ಕಳ: ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕರ ಮೇಲೆ ಬಾಂಬ್ ದಾಳಿಗೆ ಯತ್ನ ನಡೆದಿತ್ತೆ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಹೌದು ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆಯ ಹಿಂದೆಯೇ ನಡೆದಿದೆ ಎನ್ನಲಾದ ಬಾಂಬ್ ಸ್ಪೋಟ ಈ ಊಹೆಗೆ ಕಾರಣವಾಗಿದೆ.
ದುಷ್ಕರ್ಮಿಯ ಕೈಯಲ್ಲೇ ನಾಡಬಾಂಬ್ ಸ್ಪೋಟಿಸಿದ್ದು
ಕುದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.
ಹೊನ್ನಾವರದ ಮಾವಿನಕುರ್ವಾ ಬಳಿ ದುರ್ಘಟನೆ ಸಂಭವಿಸಿದ್ದು. ಆರೋಪಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿದೆ.
ಪೋಲೀಸ್ ತನಿಖೆಯ ನಂತರದಲ್ಲಿ ಸತ್ಯಾಂಶ ಹೊರ ಬರಬೇಕಾಗಿದ್ದು .ಪೋಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.