ಹೊನ್ನಾವರ : ಭಟ್ಕಳ ಹೊನ್ನಾವರದ ಶಾಸಕ ಮಂಕಾಳ ವೈದ್ಯ ಬಾಗಿಯಾಗಿದ್ದ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಸಮೀಪ ಸಿಡಿಮದ್ದು ಸ್ಫೋಟ ಸಂಭವಿಸಿದ್ದು ಅದು ದಾಳಿಯ ಸಂಚೇ ಎಂಬ ಬಗ್ಗೆ ಜನರಲ್ಲಿ ಗೊಂದಲ‌ಮನೆ‌ಮಾಡಿದೆ.

ಹೊನ್ನಾವರದ ಮಾವಿನಕುರ್ವಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಿಡಿಮದ್ದು/ ನಾಡ ಬಾಂಬ್ ಎಸೆಯಲು ಬಂಧವನ ಕೈಯಲ್ಲೇ ಸ್ಫೋಟವಾಗಿದೆ.

RELATED ARTICLES  ಪುಟಾಣಿ ವಿಜ್ಞಾನಿಗಳಿಂದ ವಿಜ್ಞಾನ ದಿನ ಆಚರಣೆ ಸರಸ್ವತಿ ವಿದ್ಯಾಕೇಂದ್ರದಲ್ಲಿ ಅರ್ಥಪೂರ್ಣವಾದ ರಾಷ್ಟ್ರೀಯ ವಿಜ್ಞಾನ ದಿನ.

ಸಿಡಿಮದ್ದು ಎಸೆಯುವ ಮೊದಲೇ ಸ್ಫೊಟವಾಗಿದ್ದು, ಇದರಿಂದ ಭಾರೀ ಅನಾಹುತವೊಂದು ತಪ್ಪಿದೆ.

ಕೈಯಲ್ಲೇ ಸಿಡಿಮದ್ದು ಸ್ಫೋಟ ಸಂಭವಿಸಿದ್ದರಿಂದ ಎಸೆಯಲು ಬಂದವನ ಕೈ ಚೂರು ಚೂರಾಗಿದೆ.

ಸ್ಥಳಕ್ಕೆ ಭೇಟಿ ನೀಡದ ತಜ್ಞರ ತಂಡದಿಂದ ಪರಿಶೀಲನೆ ನಡೆಸಿದ್ದಾರೆ. ಸಿಡಿಮದ್ದು ಅಥವಾ ನಾಡ ಬಾಂಬ್ ಎಂಬ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿದೆ.

RELATED ARTICLES  ಮತ್ಸ್ಯ ಮಹಿಳಾ ಸ್ವಾವಲಂಭಿ ಯೋಜನೆಯ ಫಲಾನುಬವಿಗಳಿಗೆ ಚೆಕ್ ವಿತರಣೆ.

ಅಲ್ಲದೇ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಆತನನ್ನು ಹೊನ್ನಾವರ ಪ್ರಭಾತ ನಗರ ನಿವಾಸಿ ರೇಮಂಡ್ ಮಿರಾಂಡ್ ಎಂದು ಗುರುತಿಸಲಾಗಿದೆ ಎಂದು ಸಾರ್ವಜನಿಕರಿಂದ ವರದಿ ಇದೆ.

ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.