ಕೇರಳದಲ್ಲಿ ರಾಜಕೀಯ ಪಕ್ಷಗಳ ಸಭೆಗಳ ಮೇಲೆ ನಾಡ ಬಾಂಬ್ ಎಸೆಯುವುದು ಮಾಮೂಲಿಯಾಗಿತ್ತು. ಆದರೆ ಬಾಂಬ್ ದಾಳಿ ಕಾರ್ಯಾಚರಣೆ ಇದೀಗ ಕರ್ನಾಟಕಕ್ಕೂ ವ್ಯಾಪಿಸಿದೆ.

ಭಟ್ಕಳ ಕಾಂಗ್ರೆಸ್ ಶಾಸಕ ಮಂಕಾಳ ವೈದ್ಯ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ನಾಡಬಾಂಬ್ ಸ್ಫೋಟಗೊಂಡಿರುವ ಘಟನೆ, ಕಾರವಾರದ ಹೊನ್ನಾವರ ತಾಲೂಕಿನ ಮಾವಿನಕುರ್ವೆಯಲ್ಲಿ ನಡೆದಿದೆ. ರೇಮಂಡ್ ಎಂಬಾತ ಕಾರ್ಯಕ್ರಮಕ್ಕೆ ನಾಡಬಾಂಬ್ ತಂದಿದ್ದ. ಈ ವೇಳೆ ರೇಮಂಡ್ ಕೈಯಲ್ಲೇ ನಾಡಬಾಂಬ್ ಸ್ಫೋಟಗೊಂಡಿದೆ.

RELATED ARTICLES  ಜಿಲ್ಲೆಯ ಭಾವಕವಿ ಉಮೇಶ ಮುಂಡಳ್ಳಿಯವರ ಸಾಲುಮರದ ತಿಮ್ಮಕ್ಕ ಹಾಡು ಬಿಡುಗಡೆ

ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ರೇಮಂಡ್ನನ್ನು ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಕಾರ್ಯಕ್ರಮದಲ್ಲಿ ನಾಡಬಾಂಬ್ ಸ್ಫೋಟಗೊಂಡಿದ್ದಕ್ಕೆ ತೀವ್ರ ಶಂಕೆಗೆ ಕಾರಣವಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ನಾಡಬಾಂಬ್ ದಾಳಿ ಭಟ್ಕಳ ಕಾಂಗ್ರೆಸ್ ಶಾಸಕ ಮಾಂಕಾಳ ವೈಧ್ಯ ಅವರನ್ನು ಗುರಿಯಾಗಿರಿಸಿ ನಡೆಸಿದ ದಾಳಿ ಎನ್ನಲಾಗಿದ್ದು, ಯಾರು ಯಾಕಾಗಿ ದಾಳಿ ಮಾಡಿದ್ರು ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ.

RELATED ARTICLES  ಕಾರವಾರದಲ್ಲಿ ವಶವಾಯ್ತು ಸಾವಿರಾರು ಮೌಲ್ಯದ ಗೋವಾ ಸಾರಾಯಿ.