ಹೊನ್ನಾವರ- ತಾಲೂಕಿನ ಕರ್ಕಿಯ ಪಾವಿನಕುರ್ವಾ ಕಡಲ ಉತ್ಸವ ಸಮಿತಿಯ ಆಶ್ರಯದಲ್ಲಿ ದಿನಾಂಕ 24/2/2018 ರಿಂದ 25/2/2018 ರವರೆಗೆ ಎರಡು ದಿನಗಳ ಕಾಲ ಸುಂದರ ಕಡಲ ತೀರದಲ್ಲಿ ಪಾವಿನಕುರ್ವಾ ಕಡಲ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು .ಈ ಉತ್ಸವದ ಸಮಾರೋಪ ಸಮಾರಂಭವನ್ನು ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಶೆಟ್ಟಿಯವರು ಉಧ್ಘಾಟಸಿದರು ನಂತರ ಮಾತನಾಡಿದ ಅವರು ಈ ಉತ್ಸವ ಅಂತ್ಯಂತ ವಿಜೃಂಭನೆಯಿಂದ ಜರುಗಿದೆ. ಈ ಭಾಗದಲ್ಲಿ ಹಲವು ಸಮಸ್ಯೆಗಳಿದ್ದು ಅವುಗಳನ್ನು ಸ್ಥಳೀಯರು ತನ್ನ ಗಮನಕ್ಕೆ ತಂದಿದ್ದು ಹೆಚ್ಚಿನ ಕಾಳಜಿ ವಹಿಸಿ ಅವುಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅದ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಆರ್ಥಿಕವಾಗಿ ಸಭಲರಿದ್ದವರು ಇಂತಹ ಉತ್ಸವ ಸಡೆಸುವುದು ವಿಶೇಷವೆನ್ನಲ್ಲ. ಆದರೆ ಇಂತಹ ಪುಟ್ಟ ಹಿಂದುಳಿದ ಗ್ರಾಮದಲ್ಲಿ ಜೀವನೋಪಾಯಕ್ಕಾಗಿ ಚಿಕ್ಕ ಪಟ್ಟ ಕೆಲಸ ಮಾಡಿಕೊಂಡು ಬದುಕುವ ಈ ಗ್ರಾಮದವರು ಉತ್ತಮ ಸಂಘಟನೆಯೊಂದಿಗೆ ಇಂತಹ ಅದ್ಧೂರಿ ಉತ್ಸವ ಹಮ್ಮಿಕೊಂಡಿರುವುದು ಶ್ಲಾಘನಾರ್ಹವಾದದ್ದು. ಈ ಪ್ರದೇಶ ಪ್ರಾಕೃತೀಕ ಸೌಂದರ್ಯವನ್ನು ಹೊಂದಿದ ಸುಂದರ ತಾಣವಾಗಿದೆ ಆದರೆ ಈ ಭಾಗದಲ್ಲಿ ರಸ್ತೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಕೊರತೆ ಇದೆ. ಶಾಸಕರು ಈ ಭಾಗದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ. ಇದೀಗ ಕಾಲಾವಕಾಶ ಕಡಿಮೆ ಇರುವುದರಿಂದ ಮಂದಿನ ದಿನಗಳಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಸರಿಯೇ ಈ ಭಾಗದಲ್ಲಿ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟನಲ್ಲಿ ಹೆಚ್ಚಿನ ಗಮನ ಹರಿಸಬೇಕು ಆಗ ಮಾತ್ರ ಈ ಗ್ರಾಮ ಅತ್ಯುತ್ತಮ ಪ್ರವಾಸಿ ತಾಣವಾಗಲಿದೆ.ಈ ಭಾಗದ ಯುವಕರು ಉತ್ತಮ ಚಿಂತನೆಗಳನ್ನು ಹೊಂದಿದ್ದು ನಾವೆಲ್ಲ ಅವರ ಕೈಗಳನ್ನು ಬಲ ಪಡಿಸಬೇಕಿದೆ ಎಂದರು.

RELATED ARTICLES  ತುಳಸಿ ಕಟ್ಟೆಯಲ್ಲಿದ್ದ ದೇವರ ಕಲ್ಲಿನಿಂದ ಹಲ್ಲೆ ..?

ಆರ್.ಎಸ್.ಎಸ್. ಟ್ರಾವೇಲ್ಸನ ಮಾಲೀಕರು ಹಾಗೂ ಬಿಜೆಪಿ ಪ್ರಮುಖರು ಆಗಿರುವ ವೆಂಕಟರಮಣ ಹೆಗಡೆ ಅವರು ಮಾತನಾಡಿ ಈ ಉತ್ಸವ ಅತ್ಯಂತ ವಿಶಿಷ್ಟ ರೀತಿಯಲ್ಲಿ ಜರುಗಿದೆ. ಇಲ್ಲಿ ನಿವೃತ ಯೋಧರನ್ನು ಹಾಗೂ ಸ್ಥಳೀಯ ಪ್ರತಿಭೆಗಳನ್ನು ಸನ್ಮಾನಿಸಲಾಗಿದೆ. ಈ ಭಾಗದಲ್ಲಿ ರಸ್ತೆಗಳು ತೀರಾ ಹದಗೆಟ್ಟದ್ದು ಸ್ಥಳೀಯರಿಗೆ ತೊಂದರೆ ಉಂಟಾಗುತ್ತಿದೆ. ಈ ಅವ್ಯವಸ್ಥೆ ಶಿಘ್ರವೇ ಸರಿಪಡಿಸಲಿ.ಮುಂದಿನ ದಿನಗಳಲ್ಲಿ ಈ ಉತ್ಸವ ಅದ್ಧೂರಿಯಾಗಿ ಜರಿಗಲಿ ಎಂದರು.
ಅಧ್ಯಕ್ಷತೆ ವಹಿಸಿದ ಸುಬ್ರಾಯ ಗೌಡ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

RELATED ARTICLES  ಮಹಾತ್ಮಾ ಗಾಂಧಿ ಪ್ರೌಢಶಾಲೆಗೆ ರೋಟರಿಯಿಂದ ಮಾಸ್ಕ್ ವಿತರಣೆ

ಇದೇ ವೇದಿಕೆಯಲ್ಲಿ ನಿವೃತ್ತ ಯೋಧರುಗಳಾದ ಪಾಂಡುರಂಗ ರಾಮಾ ಹೆಗಡೆ, ವಿಘ್ನೇಶ್ವರ ಸುಬ್ರಾಯ ನಾಯ್ಕ, ವಾಸು ಲಕ್ಷ್ಮಣ ಹರಿಕಾಂತ ಇವರರುಗಳನ್ನು ಸನ್ಮಾನಿಸುವುದರೊಂದಿಗೆ ಸ್ಥಳೀಯ ಕಿರುತೆರೆ ಹಾಸ್ಯ ನಟ ಅಶ್ವಿನ ಒಂದೂರು, ಬಹುಮುಖ ಪ್ರತಿಭೆ ಶ್ರಿಶಾ ಜಯಂತ ನಾಯ್ಕ ಅವರುಗಳನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ವಿನಾಯಕ ಶೇಟ, ರಾಮಚಂದ್ರ ಹರಿಕಂತ್ರ, ಚಂದ್ರು ರಾಮ ಖಾರ್ವಿ,ಸಂದೇಶ ಶೆಟ್ಟಿ, ಗಣಪತಿ ಮೇಸ್ತ ಸೇರಿದಂತೆ ಹಲವರು ಉಪಸ್ಥಿತರಿದ್ದರು,
ಉತ್ಸವ ಸಮಿತಿಯ ಅಧ್ಯಕ್ಷರಾದ ಪುರಂದರ ನಾಯ್ಕ ಸ್ವಾಗತಿಸಿದರು. ರಮೇಶ ನಾಯ್ಕ ವಂದಿಸಿದರು ಶೀಲಾ ಮೇಸ್ತ ನಿರೂಪಿಸಿದರು ಅರವಿಂದ ಮೇಸ್ತ ಸಹಕರಿಸಿದ್ದರು