ಶ್ರವಣಬೆಳಗೊಳ: ಮಹಾ ವಿರಾಗಿ ಬಾಹುಬಲಿಗೆ ನಡೆದ ಈ ಶತಮಾನದ ಎರಡನೇ ಮಹಾಮಜ್ಜನದ ಧಾರ್ಮಿಕ ವಿಧಿ ವಿಧಾನಗಳು ಭಾನುವಾರ ಸಂಪನ್ನಗೊಂಡವು. ಮತ್ತೆ 2030ಕ್ಕೆ ಜೈನಕಾಶಿ ಲಕ್ಷಾಂತರ ಭಕ್ತರ ಸಮಾಗಮಕ್ಕೆ ವೇದಿಕೆಯಾಗಲಿದೆ.

ಸರ್ವಾಂಗ ಸುಂದರ ಮೂರ್ತಿಗೆ ನಡೆದ 88ನೇ ಮಹಾಮಸ್ತಕಾಭಿಷೇಕವನ್ನು ಲಕ್ಷೋಪಾದಿಯಲ್ಲಿ ಜಿನ ಧರ್ಮಿಯರು, ಯಾತ್ರಾರ್ಥಿಗಳು ಕಣ್ತುಂಬಿಕೊಂಡರು. ದೇಶವಷ್ಟೇ ಅಲ್ಲದೆ ಪ್ರಪಂಚದ ಮೂಲೆ ಮೂಲೆಗಳಿಂದ ಬಂದಿದ್ದ ಭಕ್ತಗಣ, ಯಾತ್ರಾರ್ಥಿಗಳು, ಶ್ರಾವಕ, ಶ್ರಾವಕಿಯರು ವಿಂಧ್ಯ ಗಿರಿಯಿಂದ ನಿರ್ಗಮಿಸುತ್ತಿದ್ದಾರೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಈ ಬಾರಿ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಉತ್ಸವದ ಕಳೆ ಹೆಚ್ಚಿಸಿದರು.

ಪವಿತ್ರ ಜಲ, ಇಕ್ಷು ರಸ, ಕ್ಷೀರ, ಶ್ರೀಗಂಧ, ಚಂದನ, ಅಷ್ಟಗಂಧ, ಕೇಸರಿ, ಕಲ್ಕಚೂರ್ಣ, ಅರಿಸಿನ, ಕಷಾಯದ ಅಭಿಷೇಕದಿಂದ ಮಿಂದು ನಾನಾ ವರ್ಣಗಳಲ್ಲಿ ಕಂಗೊಳಿಸಿದ ಶಿಲಾ ಮೂರ್ತಿ ಈಗ ಮತ್ತೆ ಸಹಜ ರೂಪಕ್ಕೆ ಮರಳುತ್ತಿದೆ. ಕಳೆದ ಬಾರಿ ಹಾಗೂ ಈ ಬಾರಿಯ ಕಳಸಗಳ ಹರಾಜಿನಿಂದ ಬಂದ ಹಣವನ್ನು ಜನಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲು ಜೈನ ಮಠ
ನಿರ್ಧರಿಸಿದೆ.

RELATED ARTICLES  ದಿನಾಂಕ 08/07/2019 ರ ದಿನ ಭವಿಷ್ಯ ಇಲ್ಲಿದೆ.

ಗೊಮ್ಮಟ ಗಿರಿಯಲ್ಲಿ 19 ದಿನ ನಡೆದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಯಾತ್ರಿಗಳ ಮನಸೂರೆಗೊಂಡವು. ತಿಂಗಳ ಕಾಲ ಸರ್ವಾಲಂಕಾರದಿಂದ ಕಂಗೊಳಿಸಿದ ವಿಂಧ್ಯಗಿರಿ, ಚಂದ್ರಗಿರಿ, ಗೊಮ್ಮಟನಗರಿ ವಿರಾಗಿಯ ಮಜ್ಜನ ಮುಗಿಯುತ್ತಿದ್ದಂತೆ ಮನೆಯತ್ತ ಹೊರಟು ನಿಂತ ಭಕ್ತರಿಗೆ ವಿದಾಯದ ಜತೆಗೆ ‘ಮತ್ತೆ ಬನ್ನಿ ಮಹಾಮಸ್ತಕಾಭಿಷೇಕಕ್ಕೆ’ ಎಂದು ಸ್ವಾಗತವನ್ನೂ ಕೋರುತ್ತಿರುವಂತೆ ಭಾಸವಾಗುತ್ತಿದೆ.

RELATED ARTICLES  ಮಾಧ್ಯಮಗಳನ್ನು ಧಮನಿಸುತ್ತಿರುವುದು ಖಂಡನೀಯ:ಅಖಿಲ ಹವ್ಯಕ ಮಹಾಸಭೆ.

ಕೊನೆ ದಿನದ ಮಜ್ಜನ: ‘ಕೇಸರಿಯಾ.. ಕೇಸರಿಯಾ..’ ಬಾಹುಬಲಿ ಸ್ವಾಮಿ ಜಗಕ್ಕೆಲ್ಲ ಸ್ವಾಮಿ ಶಾಂತಿಯ ಮೂರುತಿಯೇ..’ ಹಾಡಿಗೆ ನರ್ತಿಸುತ್ತ ಯುವಕ, ಯುವತಿಯರು ಭಕ್ತಿ ಮೆರೆಯುವ ಮೂಲಕ ಕೊನೆ ದಿನದ ಮಜ್ಜನ ಪೂರೈಸಿದರು. ಮಹೋತ್ಸವದ ಕೊನೆದಿನ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಹೆಲಿಕಾಪ್ಟರ್‌ನಲ್ಲಿಯೇ ಬಾಹುಬಲಿ ದರ್ಶನ ಪಡೆದರು. ಜೈನಮಠದ ಬಳಿಯೇ ಏಕಶಿಲಾ ಮೂರ್ತಿಗೆ ಭಾವ ನಮನ ಸಲ್ಲಿಸಿ ‘ಈ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ’ ಎಂದರು.