ನವದೆಹಲಿ: ಹತ್ತು ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಪ್ರವೇಶ ಪತ್ರ ತಡೆ ಹಿಡಿಯದಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಶಾಲಾ ಮುಖ್ಯಸ್ಥರಿಗೆ ಸೂಚಿಸಿದೆ.

ಪೂರ್ವ ತಯಾರಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿಲ್ಲ ಎಂಬ ನೆಪವೊಡ್ಡಿ ಪರೀಕ್ಷಾ ಪ್ರವೇಶ ಪತ್ರ ತಡೆ ಹಿಡಿಯುವ ಹಲವು ಪ್ರಕರಣಗಳು ವರದಿಯಾಗಿವೆ. ಕೆಲವು ಶಾಲೆಗಳು ಪ್ರವೇಶ ಪತ್ರ ನೀಡಲು ಹಣ ನೀಡುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಪೀಡಿಸುತ್ತಿವೆ ಎಂಬ ದೂರು ಕೇಳಿ ಬಂದ ಕಾರಣ ಮಂಡಳಿಯು ಎಲ್ಲ ಸಿಬಿಎಸ್‌ಇ ಶಾಲೆಗಳಿಗೆ ಈ ಸೂಚನೆ ನೀಡಿದೆ.

RELATED ARTICLES  ಬೇಗನೆ ಪರೀಕ್ಷಾಕೇಂದ್ರ ತಲುಪಲು ಅಂಬುಲೆನ್ಸ ಬಳಸಿದ ವಿದ್ಯಾರ್ಥಿಗಳು!

ಯಾವುದೇ ಕಾರಣ ನೀಡಿ ಶಾಲೆಗಳು ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರ ತಡೆ ಹಿಡಿಯುವಂತಿಲ್ಲ. ಒಂದು ವೇಳೆ ತಡೆ ಹಿಡಿದದ್ದು ಕಂಡು ಬಂದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿಬಿಎಸ್ಇ ಎಚ್ಚರಿಕೆ ನೀಡಿದೆ.

ಶಾಲೆಗಳು ಕಳುಹಿಸುವ ಅಂತಿಮ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಸಿಬಿಎಸ್‌ಇಯಿಂದ ಪ್ರವೇಶ ಪತ್ರ ನೀಡಲಾಗುತ್ತದೆ. ಈ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ ಎಂಬುದು ಆಗಲೇ ದೃಢವಾಗಿರುತ್ತದೆ. ಹಾಗಾಗಿ ಸಿಬಿಎಸ್‌ಇಯಿಂದ ಪ್ರವೇಶ ಪತ್ರ ನೀಡಿದ ಬಳಿಕ ಅದನ್ನು ತಡೆ ಹಿಡಿಯಲು ಅವಕಾಶ ಇಲ್ಲ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಕೆ.ಕೆ. ಚೌಧರಿ ಹೇಳಿದ್ದಾರೆ.

RELATED ARTICLES  ಟ್ರ್ಯಾಕ್ಟರ್‌ಗಳಲ್ಲಿ ಡೀಸೆಲ್ ಬಳಕೆಗೆ ಕಡಿವಾಣ!

ಮಾರ್ಚ್ 5ರಂದು ಸಿಬಿಎಸ್‌ಇ ಪಠ್ಯಕ್ರಮದ 10 ಮತ್ತು 12ನೇ ತರಗತಿ ಪರೀಕ್ಷೆ ಆರಂಭವಾಗಲಿವೆ