ದುಬೈ: ಚಿರನಿದ್ರೆಗೆ ಜಾರಿರುವ ಬಾಲಿವುಡ್ನ ಚಿರಸುಂದರಿ ಶ್ರೀದೇವಿ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಶ್ರೀದೇವಿ ಆಕಸ್ಮಿಕವಾಗಿ ಬಾತ್ಟಬ್ನಲ್ಲಿ ಮುಳುಗಿ ಮೃತಪಟ್ಟಿದ್ದಾರೆಯೇ ಹೊರತು ಹೃದಯಾಘಾತದಿಂದಲ್ಲ ಎಂದು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ. ಜತೆಗೆ ಶ್ರೀದೇವಿ ಮೃತದೇಹದಲ್ಲಿ ಆಲ್ಕೋಹಾಲ್ ಅಂಶವೂ ಪತ್ತೆ ಯಾಗಿದೆ.
ವರದಿ ಬಿಡುಗಡೆ: ಭಾನುವಾರ ಶ್ರೀದೇವಿ ಮೃತ ದೇಹವನ್ನು ಮರ ಣೋತ್ತರ ಪರೀಕ್ಷೆಗೆ ಒಳ ಪಡಿಸಲಾಗಿತ್ತು. ಸೋಮವಾರ ಈ ವರದಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಪಾಸ್ಪೋರ್ಟ್ ಸಂಖ್ಯೆಯ ಜತೆಗೆ ಶ್ರೀದೇವಿ ಬೋನಿ ಕಪೂರ್ ಅಯ್ಯಪ್ಪನ್ ಎಂಬ ಸಂಪೂರ್ಣ ಹೆಸರಿನೊಂದಿಗೆ, ‘ಆಕಸ್ಮಿಕವಾಗಿ ಬಾತ್ಟಬ್ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ. ಜತೆಗೆ ಶ್ರೀದೇವಿ ಆಕಸ್ಮಿಕ ಸಾವಿನ ಹಿಂದೆ ದುಷ್ಕೃತ್ಯದ ಅನುಮಾನಗಳಿಲ್ಲ ಎಂದೂ ಉಲ್ಲೇಖಿಸಲಾಗಿದೆ.
ವರದಿ ಬಗ್ಗೆ ಅನುಮಾನ
ಈ ಮರಣೋತ್ತರ ಪರೀಕ್ಷಾ ವರದಿ ಬಗ್ಗೆಯೇ ಅನುಮಾನ ವ್ಯಕ್ತವಾಗುತ್ತಿದೆ. ಶ್ರೀದೇವಿ ಬಾತ್ಟಬ್ನಲ್ಲಿ ಆಕಸ್ಮಿಕವಾಗಿ ಮುಳುಗಿದರೋ ಅಥವಾ ಬಲವಂತವಾಗಿ ಮುಳುಗಿಸಲಾಗಿದೆಯೋ ಎಂಬುದು ಸ್ಪಷ್ಟವಾಗುವುದಿಲ್ಲ. ಅಲ್ಲದೆ, ವರದಿಗೆ ಡೈರೆಕ್ಟರ್ ಆಫ್ ಪ್ರಿವೆಂಟಿವ್ ಮೆಡಿಸಿನ್ ಸಹಿ ಹಾಕಿದ್ದಾರೆ. ಅಲ್ಲದೆ, ಈಣಗಘಐಘಎ ಎಂಬ ಪದವನ್ನು ಈಅಗಘಐಘಎ ಎಂದು ತಪ್ಪಾಗಿ ಬರೆಯಲಾಗಿದೆ. ಇದೆಲ್ಲವನ್ನು ಗಮನಿಸಿದರೆ, ಒಟ್ಟಾರೆ ಪ್ರಕರಣದ ಹಿಂದೆ ಯಾವುದೋ ಷಡ್ಯಂತ್ರ ಅಡಗಿರುವ ಶಂಕೆ ವ್ಯಕ್ತವಾಗುತ್ತಿದೆ.