ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಕಾಯಿದೆ (RERA) ಜಾರಿಯಲ್ಲಿ ಕರ್ನಾಟಕ ದೇಶದಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮತ್ತು ಗ್ರಾಂಟ್ ತೊಂರ್ಟನ್ ಸಂಸ್ಥೆ ಕಳೆದ ವಾರ ಬಿಡುಗಡೆ ಮಾಡಿರುವ ರೆರಾ ಬಗ್ಗೆ ಜಂಟಿ ವರದಿಯಲ್ಲಿ ಯೋಜನೆಗಳ ದಾಖಲಾತಿಯಲ್ಲಿ ದೇಶದಲ್ಲಿ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ಕಳೆದ ತಿಂಗಳು ಜನವರಿ 20ರವರೆಗೆ ಸಿಕ್ಕಿರುವ ಅಂಕಿಅಂಶವನ್ನು ವರದಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಈವರೆಗೆ ಸುಮಾರು 1,900 ರಿಯಲ್ ಎಸ್ಟೇಟ್ ಯೋಜನೆಗಳು ದಾಖಲಾಗಿದ್ದು 100ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 12,000 ಯೋಜನೆಗಳು ಮತ್ತು 350 ದೂರುಗಳು ದಾಖಲಾಗಿವೆ. ದಕ್ಷಿಣ ಭಾರತದಲ್ಲಿ ತಮಿಳುನಾಡು 270 ಯೋಜನೆಗಳು ಮತ್ತು 100 ದೂರುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶ, ಪುದುಚೆರಿ ಮತ್ತು ಕೇರಳಗಳಲ್ಲಿ ಮಧ್ಯಂತರ ಪ್ರಾಧಿಕಾರ ನೇಮಿಸಲಾಗಿದ್ದು, ಅವುಗಳ ರೇರಾ ಪೋರ್ಟಲ್ ನ್ನು ಆರಂಭಿಸಲಾಗಿದೆ. ತೆಲಂಗಾಣ ರಾಜ್ಯ ಇನ್ನೂ ರೇರಾ ಪೋರ್ಟಲ್ ನ್ನು ಆರಂಭಿಸಿಲ್ಲ.
ವರದಿ ಪ್ರಕಾರ, ರಿಯಲ್ ಎಸ್ಟೇಟ್ ಡೆವೆಲಪರ್ ಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಐದು ಪ್ರಶ್ನೆಗಳ ಮೂಲಕ ಅವರ ಅನುಸರಣಾ ಕಾರ್ಯವಿಧಾನವನ್ನು ನಿರ್ಣಯಿಸಲಾಗಿದೆ. ಅನುಸರಣಾ ಕಾರ್ಯವಿಧಾನವನ್ನು ನಿರ್ವಹಿಸಲು ಶೇಕಡಾ 45ರಷ್ಟು ಡೆವೆಲಪರ್ ಗಳಿಗೆ ಔಪಚಾರಿಕ ಪ್ರಕ್ರಿಯೆಗಳಿಲ್ಲ. ಇನ್ನು ಶೇಕಡಾ 44ರಷ್ಟು ಮಂದಿ ತಮ್ಮ ನಿರ್ವಹಣೆ ಮಾಹಿತಿ ವ್ಯವಸ್ಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ

RELATED ARTICLES  ಭಟ್ಕಳಕ್ಕೆ‌ ನೀರಿನ ಬರ : ಜೊತೆಗೆ ಹೊಳೆ ಪಕ್ಕದಲ್ಲಿ ಗುಂಡಿ ತೋಡಿ ನೀರು ಬಳಕೆ: ಗ್ರಾಮಸ್ಥರ ಆಕ್ರೋಶ