ಶಿರಸಿ : ದೇಶದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿದ್ದು, ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಡಳಿತದಲ್ಲಿ ಸಹಕಾರಿ ಕ್ಷೇತ್ರ, ರೈತರಿಗೆ ವಿವಿಧ ಯೋಜನೆಗಳನ್ನು ನೀಡಿದ್ದು, ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸಲಾಗಿದೆ‌ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಬನವಾಸಿ ಭಾಗದ ರೈತರಿಗೆ ಅನುಕೂಲವಾಗುವಂತಹ ವರದಾ ನದಿ ನೀರನ್ನು ಕೆರೆಗಳಿಗೆ ಹಾಯಿಸುವ ಯೋಜನೆಗೆ ಮುಖ್ಯಮಂತ್ರಿಗಳ ಸಮಯ ತೆಗೆದುಕೊಂಡು ಮುಂದಿನ ವಾರದಲ್ಲಿ ಶಿಲಾನ್ಯಾಸ ಮಾಡಾಲಾಗುವುದು. ಇದರಿಂದ ಆ ಭಾಗದ ಸಹಸ್ರಾರು ರೈತರಿಗೆ ಅನುಕೂಲ ಆಗಲಿದ್ದು, ನೀರಿನ ಬರ ಕಡಿಮೆಯಾಗಲಿದೆ ಎಂದು ಹೇಳಿದರು.
ತಾಲೂಕಿನ ಬಿಸ್ಲಕೊಪ್ಪದ ವ್ಯವಸಾಯ ಸೇವಾ ಸಹಕಾರಿ ಸಂಘ ಬಿಸ್ಲಕೊಪ್ಪದಲ್ಲಿ ಭಾನುವಾರ ಸಂಘದ ನೂತನ ಅನ್ನಭಾಗ್ಯ ಭಾಗ್ಯ ಕೊಠಡಿಯನ್ನು ಉದ್ಘಾಟಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತರ ಕನ್ನಡ ‌ಜಿಲ್ಲೆಯ ಸಹಕಾರಿ ಕ್ಷೇತ್ರ ಬಹಳ ಗಟ್ಟಿಯಾಗಿದೆ. ಅಂತೇಯೆ ರಾಜ್ಯವೂ ಸಹ ಉತ್ತಮವಾದ ಸಹಕಾರಿ ವ್ಯವಸ್ಥೆಯನ್ನು ಹೊಂದಿದೆ. ನಮ್ಮ ಸರ್ಕಾರದ ಬಂದ ನಂತರದಲ್ಲಿ ಅದನ್ನು ಮತ್ತಷ್ಟು ಸದೃಢಗೊಳಿಸಿದ್ದು, ರೈತರಿಗೂ ಸಾಲಮನ್ನಾ, ನೀರಾವರಿಯಂತಹ ಉತ್ತಮ ಯೋಜನೆಗಳನ್ನು ನೀಡಲಾಗಿದೆ ಎಂದರು.

ರೈತರ ಬದುಕು ಸಂಕಷ್ಟದ ಬದುಕಾಗಿದೆ. ಅವರ ಉದ್ಧಾರಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಸರ್ಕಾರದಿಂದ ಹಮ್ಮಿಕೊಳ್ಳಲಾಗಿದೆ. ಅವನ ಬದುಕಿಯೆ ರೂಪ ಕೊಡಬೇಕಾದ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು, ಇಂದು ಎಲ್ಲಾ ಕಡೆಗಳಲ್ಲಿಯೂ ಸಹಕಾರಿ ಸಂಘಗಳು ಪ್ರಾರಂಭವಾಗುತ್ತಿದ್ದು, ಇದರಿಂದ ಕೃಷಿಕರಿತೆ ಹೆಚ್ಚೆಚ್ಚು ಸೇವೆಗಳು ಸಿಗುತ್ತಿದೆ ಎಂದರು.

RELATED ARTICLES  ಯಲ್ಲಾಪುರದ ಸಮೀಪ‌ ಸಂಭವಿಸಿತು ಭಾರೀ ಅಪಘಾತ:ಓರ್ವನ ಸಾವು, ಬಸ್ ನಲ್ಲಿದ್ದ ಅನೇಕರಿಗೆ ಗಾಯ!

ಬಂಗಾರದ ಒಡವೆಗಳ ಸೇಫ್ ಲಾಕರ್ ವ್ಯವಸ್ಥೆಯನ್ನು ಶಿರಸಿ ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿ, ಮಾತನಾಡಿ ಸಂಘ ಪ್ರಾರಂಭವಾಗಿ ೯೬ ವರ್ಷಗಳಾಗಿದೆ. ಇಂದು ತಾಲೂಕಿನಲ್ಲಿ ಅತ್ಯಂತ ಉತ್ತಮವಾದ ಸಂಘ ಎನ್ನುವ ಹೆಮ್ಮೆ ಸಂಘಕ್ಕಿದೆ. ಸಂಘದ ಈ ಬೆಳವಣಿಗೆಗೆ ಹಿರಿಯ ಸದಸ್ಯರ ಕೊಡುಗೆ ಕಾರಣವಾಗಿದೆ. ನಮ್ಮ ಜಿಲ್ಲೆ ಸಹಕಾರಿ ತತ್ವದಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ. ಸಹಕಾರಿ ತತ್ವದ ಅಡಿ ನಮ್ಮ ಜಿಲ್ಕೆಯಲ್ಲಿ ಸಹಕಾರಿ ಆಂದೋಲನ ಬೆಳೆದಿದೆ. ಪರಸ್ಪರ ವಿಶ್ವಾಸದಿಂದ ಸಹಕಾರಿ ಸಂಘ ನಮ್ಮ ಮನೆಯ ಭಾಗ ಎನ್ನುವಷ್ಟು ಆತ್ಮೀಯ, ಭಾವನಾತ್ಮಕ ಸಂಬಂಧವಿದೆ. ನಮ್ಮ ಸಾಮಾಜಿಕ ಜೀವನಕ್ಕೆ ಭದ್ರತೆಯನ್ನು ಸಹಕಾರಿ ಸಂಘ ನೀಡಿದೆ ಎಂದು ಸಹಕಾರಿ ಸಂಘ ಮತ್ತು ತತ್ವಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಕಳೆದ ೧೨ ವರ್ಷಗಳಿಂದ ತಪಸ್ಸಿನ ರೀತಿಯಲ್ಲಿ ಎಸ್.ಎನ್.ಭಟ್ ಅವರು ಅಧ್ಯಕ್ಷರಾಗಿ ಸಂಘವನ್ನು ಬೆಳೆಸಿದ್ದಾರೆ. ಸಂಘ ಅವರ ಮುಂದಾಳತ್ವದಲ್ಲಿ ಸಮೃದ್ಧವಾಗಿ ನಡೆದಿದೆ. ಅದರಲ್ಲೂ ಇಂದು ಉದ್ಘಾಟನೆ ಮಾಡಿದ ಸೇಫ್ ಲಾಕರ್ ವ್ಯವಸ್ಥೆ ನಿಮ್ಮ ಅನುಕೂಲಕ್ಕಾಗಿ ತರಲಾಗಿದೆ‌. ಕಳ್ಳತನದ ಭಯವಿಲ್ಲದೇ ಬಳಸಬಹುದಾಗಿದೆ. ಸಂಘದ ಸದಸ್ಯರಿಗೆ ಹೆಚ್ಚೆಚ್ಚು ಅನುಕೂಲಗಳನ್ನು ಸೃಷ್ಟಿಸಲಾಗಿದೆ. ಇದು ಅತ್ಯಂತ ರಚನಾತ್ಮಕ ಕೆಲಸವಾಗಿದೆ ಎಂದರು.‌
ರೈತರು ಇಂದು ಕಷ್ಟ ಪಡುತ್ತಿದ್ದಾರೆ. ಅವರಿಗೆ ಎಷ್ಟು ಸಾಲ ಮನ್ನಾ ಆದರೂ, ಎಷ್ಟು ಸೌಲಭ್ಯ ಕೊಟ್ಟರೂ ಕಡಿಮೆಯೇ ! ಕೃಷಿ ಅವಲಂಬಿತರಿಗೆ ಕೃಷಿ ಮೇಲೆ ವಿಶ್ವಾಸ ಮೂಡುವಂತಹ ಯೋಜನೆಗಳು ಸಹಕಾರಿ ಸಂಘಗಳಿಂದ ಆಗಬೇಕು. ಸರ್ಕಾರವೂ ರೈತರೊಂದಿಗೆ ಸದಾ ಇರಬೇಕ. ಎಂದರು.‌

RELATED ARTICLES  ಬದುಕಿಗೆ ದಾರಿಯೇ ಇಲ್ಲ! ಮೂಲ ಸೌಕರ್ಯ ಇಲ್ಲದೇ ಪರಿತಪಿಸುತ್ತಿದ್ದಾರೆ ಕುಮಟಾ ಬಾಡದ ಈ ಜನ!

ಎಪಿಎಮ್ಸಿ ಅಧ್ಯಕ್ಷ ಸುನೀಲ್ ನಾಯ್ಕ ಸಂಘದ ನೂತನ ಸಮೃದ್ಧಿ ಕೊಠಡಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸ್ಲಕೊಪ್ಪ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಭಟ್ ವಹಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಬಸವರಾಜ ದೊಡ್ಮನಿ, ಟಿ.ಎಸ್.ಭಟ್ , ವಿ.ಎಮ್.ಹೆಗಡೆ, ಸತೀಶ ಹೆಗಡೆ ಮುಂತಾದವರು ಇದ್ದರು.
ಬಿಸ್ಲಕೊಪ್ಪ ಸಂಘದಲ್ಲಿ ಹಲವಾರು ವರ್ಷಗಳಿಂದ ವ್ಯವಹಾರ ನಡೆಸಿಕೊಂಡು ಸಂಘದ ಬೆಳೆವಣಿಗೆಗೆ ಕಾರಣರಾದ ಸಂಘದ ಹಿರಿಯ ಸದಸ್ಯರುಗಳಲ್ಲಿ ೩ ಮಹಿಳಾ ಸದಸ್ಯರೂ ಸೇರಿ ಒಟ್ಟೂ ೧೫ ಸದಸ್ಯರುಗಳನ್ನು ಸನ್ಮಾನಿಸಿ ಗೌರವಿಸಿದರು. ಇದರಲ್ಲಿ ೯೫ ವರ್ಷಕ್ಕೂ ಅಧಿಕ‌ ವರ್ಷ ವಯಸ್ಸಾದ ಸದಸ್ಯರೂ ಇದ್ದು, ಪ್ರತಿಯೊಬ್ಬರಿಗೂ ಸಮ್ಮಾನ ಪತ್ರವನ್ನು ನೀಡಿ, ಶಾಲು ಹೊದೆಸಿ ಸನ್ಮಾನಿಸಲಾಯಿತು. ಅಲ್ಲದೇ ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಇಂಜಿನಿಯರ್ ಟಿ.ಜಿ.ಭಟ್ ಹಾಗೂ ಎಪಿಎಮ್ಸಿ ಅಧ್ಯಕ್ಷ ಸುನೀಲ್ ನಾಯ್ಕ, ಕಟ್ಟಡದ ಮೇಲುಸ್ತುವಾರಿ ವಹಿಸಿದ್ದ ಎಸ್.ಎನ್.ಹೆಗಡೆ ಅವರುಗಳನ್ನೂ ಸಹ ಸಮ್ಮಾನಿಸಿದರು.