ದಿನಾಂಕ: 22.02.2018 ರಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಹಾಗೂ ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಸ್ನಾತಕೋತ್ತರ ಪದವಿ ವಿಭಾಗದ ಚರ್ಚಾಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ,ಧಾರವಾಡದ ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗದ ಕುಮಾರ ಶ್ರೀ. ಶ್ರೀಗಣೇಶ ಸುಬ್ರಾಯ ಹೆಗಡೆ ಇವರು ರಾಜ್ಯ ಮಟ್ಟಕ್ಕೆ ದ್ವಿತೀಯ ಸ್ಥಾನ ಪಡೆಯುವುದರ ಜೊತೆಗೆ ಜನಮೆಚ್ಚುಗೆಯ ಅತ್ಯುತ್ತಮ ಚರ್ಚಾಪಟುವಾಗಿ ಆಯ್ಕೆಯಾಗಿ ಬೆಳ್ಳಿಯ ವೀರಾಗ್ರಣಿ ಪರ್ಯಾಯ ಫಲಕವನ್ನು ಬಹುಮಾನವಾಗಿ ಪಡೆದಿದ್ದಾರೆ..

RELATED ARTICLES  ಬೈಕ್ ,ಬುಲೆರೊ ಡಿಕ್ಕಿ ಬೈಕ್ ಸವಾರ ಸಾವು

ಕುಮಾರ ಶ್ರೀ. ಶ್ರೀಗಣೇಶ ಸುಬ್ರಾಯ ಹೆಗಡೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಾಗೋಡಿನ ಬೀರನಗೋಡ ಗ್ರಾಮದ ಶ್ರೀ ಸುಬ್ರಾಯ ಹೆಗಡೆ ಹಾಗೂ ಮಹಾಲಕ್ಷ್ಮೀ ಹೆಗಡೆಯವರ ಪುತ್ರನಾಗಿರುತ್ತಾನೆ.

RELATED ARTICLES  ಭಟ್ಕಳ ತಾಲೂಕಾ ಕಸಾಪದಿಂದ ಬಿ.ಪಿ.ಶಿವಾನಂದ ರಾವ್ ಅವರ ಸಾಹಿತ್ಯ ಸಂವಾದ ಮತ್ತು ಕವಿಗೋಷ್ಠಿ