ಬೆಳಗಾವಿ: ದಿನೇ ದಿನೇ ಉಂಟಾದ ಕ್ಯಾಬೇಜ್ ದರಕುಸಿತದಿಂದ ಬೇಸತ್ತು ರೈತರು ತಮ್ಮ ಹೊಲದಲ್ಲಿರುವ ಕ್ಯಾಬೇಜ್ ಬೆಳೆ ನಾಶ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕ್ಯಾಬೇಜ್ ದರ ಏರಿಕೆಯಾಗಬಹುದು ಎಂದು ತಿಂಗಳುಗಟ್ಟಲೆ ರೈತರು ಕಾದಿದ್ದಾರೆ, ಆದರೆ ದಿನೇ ದಿನ ದರ ಕುಸಿತವಾದ ಹಿನ್ನೆಲೆಯಲ್ಲಿ ದಿಕ್ಕು ತೋಚದೆ ರೈತರು ತಮ್ಮ ಹೊಲದಲ್ಲಿ ಬೆಳದಿದ್ದ ಕ್ಯಾಬೇಜ್ ಮೇಲೆ ಟ್ರ್ಯಾಕ್ಟರ್ ಹರಿಸಿ ಸಂಪೂರ್ಣ ಬೆಳೆಯನ್ನು ನಾಶ ಮಾಡಿದ್ದಾರೆ.
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ರೈತರು ತಮ್ಮ ಬೆಳೆಯನ್ನು ನಾಶ ಮಾಡಿದ್ದಾರೆ. ರೈತ ಲಕ್ಷ್ಮಣ ಕಮಾನೆ ಅವರ ಹೊಲದಲ್ಲಿ ಟ್ರ್ಯಾಕ್ಟರ್ ಹರಿಸಿ ಬೆಳೆ ನಾಶ ಮಾಡಲಾಗಿದೆ ಅವರು ಒಂದು ಎಕರೆ ಜಮೀನಿನಲ್ಲಿ ಕ್ಯಾಬೇಜ್ ಬೆಳಯನ್ನು ಬೆಳೆದಿದ್ದರು.
ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಕೇವಲ1 ರೂ ಆದ ಪರಿಣಾಮ ಈ ಕಾರ್ಯವನ್ನು ಮಾಡಿದ್ದಾರೆ. ಹೋಲ್ ಸೇಲ್ ಮಾರಾಟ ಮಾಡುತ್ತಿದ್ದ ರೈತನರಿಗೆ ಸೂಕ್ತ ದರ ಸಿಗದ ಹಿನ್ನೆಲೆಯಲ್ಲಿ ಬೆಳೆಯನ್ನು ನಾಶ ಮಾಡಲಾಗಿದೆ. ದರ ಕುಸಿತದಿಂದ ತತ್ತರಿಸಿದ ರೈತರಿಗೆ ಜಿಲ್ಲಾಡಳಿತ ಸ್ಪಂದಿಸಿದೆ.