ಕುಮಟಾ : ತಾಲೂಕಿನ ಹಳಕಾರಿನಲ್ಲಿ ಶ್ರೀ ಜಟಕ ದೇವ ವಿಶ್ವಸ್ಥ ಸಂಸ್ಥೆಯ ಸಹಯೋಗದಲ್ಲಿ ನೂತನ ಸಭಾ ಮಂದಿರದ ಉದ್ಘಾಟನಾ ಸಮಾರಂಭ ನಡೆಯಿತು.

ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶ್ರೀಮತಿ ಶಾರದಾ ಶೆಟ್ಟಿಯವರು ನೂತನ ಸಭಾಭವನ ಉದ್ಘಾಟಿಸಿದರು.

RELATED ARTICLES  ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರಾಗಿ ಗೋವಿಂದ ನಾಯ್ಕ

ಈ ಸಭಾಭವನ ನಿರ್ಮಾಣಕ್ಕೆ ಶಾಸಕಿ ಶಾರದಾ ಶೆಟ್ಟಿಯವರು ಮುತುವರ್ಜಿ ವಹಿಸಿ ಮುಜರಾಯಿ ಇಲಾಖೆಯಿಂದ 4 ಲಕ್ಷ. ಅನುದಾನ ಮಂಜೂರು ಮಾಡಿಸಿದ್ದಾರೆ. ಅದಲ್ಲದೇ ಹೊಲನಗದ್ದೆ ಪಂಚಾಯತ ವ್ಯಾಪ್ತಿಯಲ್ಲಿ 5 ಕೋಟಿ ಅನುದಾನವನ್ನು ನೀಡಿದ್ದಾರೆ. ಹೀಗಾಗಿ ಶಾಸಕರು ಅಭಿನಂದನಾರ್ಹರು ಎಂಬ ಅಭಿಪ್ರಾಯ ವ್ಯಕ್ತವಾಯಿತು.

RELATED ARTICLES  ಸಂಪನ್ನವಾದ ಧಾರೇಶ್ವರ ಜಾತ್ರೆ: ಹರಿದುಬಂದ ಜನಸಾಗರ

IMG 20180227 WA0004

ಡಾ. ಶಂಕರ ಭಟ್ಟ ಧಾರೇಶ್ವರ ದೇವರು ಮತ್ತು ಧರ್ಮ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಗ್ರಾ.ಪಂ ಅಧ್ಯಕ್ಷರಾದ ರಾಘವೇಂದ್ರ ಪಟಗಾರ, ತಾ.ಪಂ ಸ್ಥಾಯೀ ಸಮಿತಿ ಅಧ್ಯಕ್ಷ ಜಗನ್ನಾಥ ನಾಯ್ಕ ಬಾಡ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.