ಹೊನ್ನಾವರ: ತಾಲೂಕಿನ ರಾಘವೇಂದ್ರ ಮೇಸ್ತಾ ಅವರು, ಅವಧಿ ಪೂರ್ವ ಜನಿಸಿದ ತಮ್ಮ ಅವಳಿ ಮಕ್ಕಳಿಗೆ, ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿರುವುದನ್ನು ಗಮನಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಆರ್ಥಿಕವಾಗಿ ಕುಟುಂಬಕ್ಕೆ ನೆರವಾಗಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

RELATED ARTICLES  ಮುರ್ಡೇಶ್ವರದಲ್ಲಿ ಸಮುದ್ರದಲ್ಲಿ ಮುಳುಗಿ ಈರ್ವರು ನಾಪತ್ತೆ.

ರಾಘವೇಂದ್ರ ಮೇಸ್ತಾರವರ ಮನೆಗೆ ಭೇಟಿ ನೀಡಿ “ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್” ವತಿಯಿಂದ ಹಣಕಾಸಿನ ನೆರವು ನೀಡಿ, ರಾಘವೇಂದ್ರ ಮೇಸ್ತಾರವರ ಕುಟುಂಬಕ್ಕೆ ಸಂತೈಸಿ, ಹೆಚ್ಚಿನ ಹಣಕಾಸಿನ ಅಗತ್ಯ ಬೇಕಾದಲ್ಲಿ ಸಿಗುವ ದಾರಿಯನ್ನು ತಿಳಿಸಿ ಧೈರ್ಯ ತುಂಬಿದ ನಾಗರಾಜ ನಾಯಕರ ಕಾರ್ಯದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು. ಜನತೆ ನಾಗರಾಜ ನಾಯಕ ತೊರ್ಕೆಯವರ ಬಗ್ಗೆ ಅಪಾರ ಮೆಚ್ವುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES  ಉತ್ತರ ಕನ್ನಡದ ಪ್ರಮುಖ ಸುದ್ದಿಗಳು