ಕುಮಟಾ: ಕುಮಟಾ ತಾಲೂಕು 7ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಕತಗಾಲದಲ್ಲಿ ನಡೆಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಘೋಷಿಸಿದರು. ಗುಡೇಅಂಗಡಿಯಲ್ಲಿ ನಡೆದ ತಾಲೂಕು 6ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮುಂದಿನ ಸಮ್ಮೇಳನ ನಡೆಸುವ ಕುರಿತಂತೆ ಈ ನಿರ್ಣಯ ತಿಳಿಸಿದ ಜಿಲ್ಲಾಧ್ಯಕ್ಷರು ಕತಗಾಲದ ಅಕ್ಷರಕಲಾ ಸಂಘಟನೆಯ ಮನವಿಯ ಮೇರೆಗೆ ಆ ಭಾಗಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

RELATED ARTICLES  ಕುಮಟಾ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ

• ತಾಲೂಕು ಕಸಾಪ ಅಧ್ಯಕ್ಷ ಡಾ. ಶ್ರೀಧರ ಗೌಡ ಅವರು ಮುಂದಿನ ಸಮ್ಮೇಳನ ನಡೆಸಲು ಮುರೂರು, ಧಾರೇಶ್ವರ, ಕತಗಾಲ, ಕೂಜಳ್ಳಿ ಗ್ರಾಮಗಳಿಂದ ಮನವಿ ಬಂದಿದ್ದು ಇಂಥ ಸಕಾರಾತ್ಮಕ ಉತ್ಸಾಹ ಎಲ್ಲೆಡೆಯಿಂದ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಜಿಲ್ಲಾಧ್ಯಕ್ಷರ ಸೂಚನೆಯಂತೆ ಕತಗಾಲ್ಕಕೆ 7ನೇ ಸಮ್ಮೇಳನ ನಡೆಸುವ ಅವಕಾಶ ನೀಡಲಾಗಿದೆ ಎಂದರು.

ಅಂತರ ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಮುಂದಿನ ಸಮ್ಮೇಳನದ ಹೊಣೆ ಹೊತ್ತ ಕತಗಾಲದ ಅಕ್ಷರಕಲಾ ಸಂಘಟನೆಯ
ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ ಮತ್ತು ಅವರ ತಂಡದವರನ್ನು ಕನ್ನಡದ ಘೋಷದೊಂದಿಗೆ ಗುಡೇಅಂಗಡಿಯ ಕನ್ನಡದ ಧ್ವಜವನ್ನು ನೀಡಿ
ಅಭಿನಂದಿಸಿದರು.

RELATED ARTICLES  ನಾಳೆಯೂ ಶಾಲೆಗೆ ರಜೆ

ಅನಂತರ ಮಾತನಾಡಿದ ಕೃಷ್ಣಾನಂದ ವೆರ್ಣೇಕರ್ ಅವರು ತಾವು ಕತಗಾಲದಲ್ಲಿ ಎಲ್ಲರ ಸಹಕಾರದೊಂದಿಗೆ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ
ಪರಿಷತ್ತಿನ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಿ ಕನ್ನಡ ತಾಯಿಯ ಕೀರ್ತಿ ಹೆಚ್ಚಿಸುತ್ತೇವೆ ಅಂದರು. ಈ ಸಂದರ್ಭದಲ್ಲಿ 6ನೇ ಸಮ್ಮೇಳನಾಧ್ಯಕ್ಷ ದಯಾನಂದ ತೊರ್ಕೆ, ಸ್ವಾಗತ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ, ಕಾರ್ಯಾಧ್ಯಕ್ಷ ಜಗನ್ನಾಥ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.