ಕುಮಟಾ: ಉತ್ತರಕನ್ನಡದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ದೇಶ ಭಂಡಾರಿ ಸಮಾಜವನ್ನು ಗುರುತಿಸುವಲ್ಲಿ ವಿಳಂಬವಾಯಿತು ಇದಕ್ಕೆ ಕಾರಣ ಸರಕಾರವಲ್ಲ ಬದಲಿಗೆ ಸಮಾಜವೇ . ಮಗು ಅತ್ತ ಹೊರತು ತಾಯಿ ಹಾಲನ್ನು ಉಣಿಸುವುದಿಲ್ಲ .ಭಂಡಾರಿ ಸಮಾಜದವರು ತಮ್ಮ ಪ್ರಾತಿನಿಧ್ಯಕ್ಕಾಗಿ ಸರಕಾರವನ್ನು ಆಗ್ರಹಿಸಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಚಲನಚಿತ್ರನಟ ಶ್ರೀ ಕಾಸರಗೋಡು ಚಿನ್ನಾ ಅಭಿಪ್ರಾಯ ಪಟ್ಟರು.

ಅವರು ಭಾನುವಾರ ಮುಂಜಾನೆ ಕುಮಟಾದ ರಾಜೇಂದ್ರ ಪ್ರಸಾದ ಸಭಾಭವನದಲ್ಲಿ ಜರುಗಿದ ಕುಮಟಾ ತಾಲೂಕಾ ಭಂಡಾರಿ ಸಮಾಜೋನ್ನತಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ನಲ್ವತ್ತೊಂದಕ್ಕಿಂತ ಹೆಚ್ಚು ಕೊಂಕಣಿ ಮಾತೃಭಾಷಿಕ ಜಾತಿಗಳಿವೆ ಅವುಗಳಲ್ಲಿ ಕ್ಷತ್ರಿಯ ಪರಂಪರೆಯ ದೇಶ್ ಭಂಡಾರಿ ಸಮಾಜವೂ ಒಂದು ತಾನು ಅಕಾಡೆಮಿಯ ಅಧ್ಯಕ್ಷನಾದ ವೇಳೆ ಕುಮಟಾಕೆ ಬಂದಾಗ ಈ ಸಮಾಜದ ಪರಿಚಯ ಆಯಿತು ಪ್ರತಿಭಾವಂತ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿರುವ ಈ ಸಮಾಜಕ್ಕೆ ಅಕಾಡೆಮಿಯಲ್ಲಿ ಪ್ರಾತಿನಿಧ್ಯ ನೀಡಲು ಪಟ್ಟುಹಿಡಿದು ಈ ಸಮಾಜದ ಯುವ ಪ್ರತಿಭೆ ಚಿದಾನಂದ ಭಂಡಾರಿಯನ್ನು ಸದಸ್ಯನಾಗಿಸುವಲ್ಲಿ ಯಶಸ್ವಿಯಾದೆ.ಇನ್ನು ಮುಂದೆಯೂಕೂಡ ಶೈಕ್ಷಣಿಕವಾಗಿ,ಸಾಂಸ್ಕೃತಿಕ ವಾಗಿ ಹೆಚ್ಚಿನ ಪ್ರಗತಿಹೊಂದುವಂತೆಮಾಡುವ ಕೈಂಕರ್ಯದಲ್ಲಿ ಕೈಜೋಡಿಸುವುದಾಗಿ ಅವರು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಲಿಂಗಪ್ಪ ಎಸ್ ಭಂಡಾರಿಯವರು ಮಾತನಾಡಿ ಸಮಾಜದ ವಿಧ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆಯಬೇಕೆಂದು ಸಲಹೆನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಅರವಿಂದ ತೆಂಡೂಲ್ಕರ್ ವಹಿಸಿದ್ದರು.

RELATED ARTICLES  ಮನೆ ಗೋಡೆ ಕುಸಿದು ಮಹಿಳೆ ಅಸ್ವಸ್ಥ

ವೇದಿಕೆಯಲ್ಲಿ ಹಿರಿಯವಕೀಲ ವಿ .ಎಂ.ಭಂಡಾರಿ ಹೊನ್ನಾವರ,ಮೋಹನ ಕಿಂದಳಕರ್ ಕಾರವಾರ.ಚಲನಚಿತ್ರ ನಟ ಶಶಿಭೂಷಣ್ ಕಿಣಿ,ಮಹಿಳಾ ಸಂಘದ ಅಧ್ಯಕ್ಷೆ ಸುಷ್ಮಾ ಗಾಂವ್ಕರ್ ತಾಲೂಕಾ ಅಧ್ಯಕ್ಷ ಮಂಜುನಾಥ ಬೀರಕೋಡಿ,ಕಾರ್ಯದರ್ಶಿ ಅರುಣ ಮಣಕೀಕರ್,ಶ್ರೀಧರ ಬೀರಕೋಡಿ ಚಿದಾನಂದ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಗಂಗೆಕೊಳ್ಳ ತೀರದಲ್ಲಿ ನಿನ್ನೆ ಶೆಲ್ ಪತ್ತೆ:ಬಾಂಬ್ ಎಂದು ಹೆದರಿದ ಜನತೆ

ಈ ಸಂಧರ್ಭದಲ್ಲಿ ಸಮಾಜದ ಪರವಾಗಿ ಚಿನ್ನಾ ಅವರನ್ನು ಸನ್ಮಾನಿಸಲಾಯಿತು.

ಅನೇಕ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಗೈಯಲಾಯಿತು.
ಜಯಂತ ಭಂಡಾರಿ ರಮೇಶ್ ಭಂಡಾರಿ ರಮಾಕಾಂತ ಹೊಸಕಟ್ಟಾ, ಪ್ರಭಾಕರ ಮಣಕೀಕರ ವಿಜಯ್ ಬೀರಕೋಡಿ,ಸುರೇಶ ಗಾಂವ್ಕರ್ ಮೊದಲಾದವರು ಸಹಕರಿಸಿದ್ದರು.ಶಿಕ್ಷಕ ಗೌರೀಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದ್ದರು.