ಕಾರವಾರ:ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪ್ರಧಾನ ಮಂತ್ರಿ ಮಾತೃವಂದಾನಾ ಯೋಜನೆ ಅಡಿಯಲ್ಲಿ ಹೋರ ಗುತ್ತಿಗೆ ಆದಾರದ ಮೇಲೆ ಜಿಲ್ಲಾ ಮಟ್ಟದ ಯೋಜನಾ ಸಂಯೋಜಕರು ಹಾಗೂ ಕಾರ್ಯಕ್ರಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಜಿಲ್ಲಾ ಮಟ್ಟದ ಯೋಜನಾ ಸಂಯೋಜಕರ ಹುದ್ದೆಗೆ ಅರ್ಜಿ ಸಲ್ಲಿಸಬಯಸುವರು ಸಮಾಜ ವಿಜ್ಞಾನ, ಜೀವ ವಿಜ್ಞಾನ, ಪೌಷ್ಠಕ, ವೈದ್ಯಕೀಯ , ಆರೋಗ್ಯ ನಿರ್ವಹಣೆ, ಸಮಾಜ ಕಾರ್ಯ ಮತ್ತು ಗಾಮೀಣ ನಿರ್ವಹಣೆ ಇವುಗಳಲ್ಲಿ ಯಾವುದಾದರೊಂದು ಸ್ನಾತಕೊತ್ತರ ಪದವಿ ಮತ್ತು ಒಂದು ವರ್ಷದ ಅನುಭವ, ಕಾರ್ಯಕ್ರಮ ಸಹಾಯಕರ ಹುದ್ದೆಗೆ ಸಮಾಜ ವಿಜ್ಞಾನ, ಸಮಾಜ ಕಾರ್ಯ, ಗ್ರಾಮೀಣ ನಿರ್ವಹಣೆ, ಮತ್ತು ಸಂಖ್ಯಾಶಾಸ್ತ್ರ ಇವುಗಳಲ್ಲಿ ಯಾವುದಾದರೊಂದು ಪದವಿ ಜೊತೆಗೆ ಸರ್ಕಾರಿ, ಸ್ವಯಂ ಸಂಸ್ಥೆಗಳಲ್ಲಿ ಕನಿಷ್ಠ 1 ವರ್ಷದ ಅನುಭವ, ಗಣಕ ಯಂತ್ರದ ಬಗ್ಗೆ ಮಾಹಿತಿ ಮತ್ತು ಕನ್ನಡ ಮತ್ತು ಆಂಗ್ಲ ಭಾಷೆಯ ಬಗ್ಗೆ ಪ್ರಾವೀಣ್ಯತೆ ಹೊಂದಿರಬೇಕು.

RELATED ARTICLES  ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರಕ್ಕೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಮಾರ್ಚ 15 ಕೊನೆಯ ದಿನವಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಉಪ ನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಲ್ಲಿಸಬೇಕು. ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಬೃಹತ್ ಕಾಳಿಂಗ ಹಿಡಿದ ಉರಗ ಪ್ರೇಮಿ - ಹೇಗಿತ್ತು ಆ ರೋಚಕ ಕ್ಷಣ..?